Realtime blog statisticsweb statistics
udupibits.in
Breaking News
# ಖ್ಯಾತ ಯಕ್ಷಗಾನ ಕಲಾವಿದ ಜಯ ಕುಮಾರ್ ಉದ್ಯಾವರ ನಿಧನ

ಪ್ರೀತಿಯ ವಕ್ತಾರರಾಗಲು ಕ್ರಿಸ್ ಮಸ್ ಪ್ರೇರಣೆಯಾ ಗಲಿ: ಉಡುಪಿ ಬಿಷಪ್ ಸಂದೇಶ

ಉಡುಪಿ: ಪ್ರೀತಿಯ, ಸುಖದ, ಶಾಂತಿಯ ಹಬ್ಬವಾದ ಕ್ರಿಸ್ಮಸ್ ಹಬ್ಬವು ಹಗೆತನ, ಧ್ವೇಷ ತೊರೆದು ತ್ಯಾಗ, ನಿಸ್ವಾರ್ಥಿಗಳಾಗಲು, ಸಕುಲ ಸದ್ಗುಣಗಳನ್ನು ಮೈಗೂಡಿಸಿಕೊಂಡು, ಪ್ರೀತಿಯ ವಕ್ತಾರರಾಗಲು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ (ಬಿಷಪ್) ಜೆರಾಲ್ಡ್ ಐಸಾಕ್ ಲೋಬೊ ಅವರು ನಾಡಿನ ಜನತೆಗೆ ಕ್ರಿಸ್ಮಸ್ ಸಂದೇಶ ನೀಡಿದ್ದಾರೆ.
mangalorean.com ವತಿಯಿಂದ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ಸಂಜೆ ನಡೆದ ಪತ್ರಕರ್ತರೊಂದಿಗೆ ಕ್ರಿಸ್ಮಸ್ ಸೌಆಹಾರ್ದ ಕೂಟದಲ್ಲಿ ಅವರು ಕ್ರಿಸ್ಮಸ್ ಸಂದೇಶ ನೀಡಿ ಮಾತನಾಡುತ್ತಿದ್ದರು.
ಪ್ರೀತಿ ಮತ್ತು ಸತ್ಯವನ್ನು ಉಳಿಸಲು ಪ್ರಭು ಏಸು ಮಾನವನಾದ. ಶಿಕ್ಷಸುವ ಬದಲು ರಕ್ಷಿಸಲು ಜನ್ಮತಾಳಿದ ದೇವಪುತ್ರ ಏಸು ಪ್ರಭು, ಪ್ರೀತಿಯ ಭಾಷೆಯನ್ನು ಪರಿಚಯಿಸಲು, ಪ್ರೀತಿಯ ಸಾಮ್ರಾಜ್ಯ ನಿರ್ಮಿಸಲು, ಕತ್ತಲೆಯನ್ನು ತೊಲಗಿಸಿ ಬೆಳಕು ಮೂಡಿಸಲು ಬಾಳಿ ಬದುಕಿದರು. ಪ್ರೀತಿಯೇ ದೇವರು, ದೇವರೇ ಪ್ರೀತಿ ಎನ್ನುವುದನ್ನು ಏಸು ಪ್ರಭು ತೋರಿಸಿಕೊಟ್ಟರು. ಕ್ರಿಸ್ಮಸ್ ಮಾನವನನ್ನು ದೈವತ್ವದೆಡೆಗೆ ಕೊಂಡೊಯ್ಯುವ ಹಬ್ಬ ಎಂದು ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದು ಕ್ರಿಸ್ಮಸ್ ಸಂದೇಶ ನೀಡಿದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾದ್ಯಕ್ಷ ಕಿರಣ್ ಮಂಜನಬೈಲ್ ಅವರು ಅನ್ಯಾಯ, ಅಶಾಂತಿ ಮತ್ತು ಧ್ವೇಷದ ಪ್ರಳಯವಾಗಲಿ ಎಂದರು.
ಜಿಲ್ಲಾ ವಾರ್ತಾಧಿಕಾರಿ ಜುಂಜಣ್ಣ, ಮಂಗಳೂರಿಯನ್ ಡಾಟ್ ಕಾಮ್ ನ ಮೈಕೆಲ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು. ಚಿತ್ರ: ಶ್ರೀರಾಮ ದಿವಾಣ.

Leave a Reply

Your email address will not be published. Required fields are marked *