Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಜ.7: ಲಾಠಿಚಾರ್ಜ್ ಖಂಡಿಸಿ ಉಡುಪಿಯಲ್ಲಿ ದಲಿತ ಸಂಘ ಟನೆಗಳಿಂದ ಬೃಹತ್ ಪ್ರತಿಭಟನೆ

ಉಡುಪಿ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಿಷ್ಟ ಪದ್ಧತಿಗಳಾದ ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಪ್ರತಿಭಟನೆ ನಡೆಸಿದ ಸಿಪಿಐಎಂ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಅಮಾನುಷ ಕೃತ್ಯವಾಗಿದ್ದು, ಇದಕ್ಕೆ ಕಾರಣಕರ್ತರಾದ ಉಡುಪಿಯ ಇನ್ ಚಾರ್ಜ್ ತಹಶಿಲ್ದಾರ್ ಜಗನ್ನಾಥ ರಾವ್, ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾನೆ ಹಾಗೂ ಉಡುಪಿ ಸರ್ಕಲ್ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು. ಎಸ್ಪಿ ಡಾ.ಎಂ.ಬಿ.ಬೋರಲಿಂಗಯ್ಯ ಇದರ ನೈತಿಕ ಹೊಣೆ ಹೊತ್ತುಕೊಳ್ಳಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.
ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಒಗ್ಗಟ್ಟಾಗಿ ಒಕ್ಕೂಟವನ್ನು ರಚಿಸಿಕೊಂಡು ಇಂದು ಸಂಜೆ ನಗರದ ಖಾಸಗಿ ಹೋಟೇಲಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಬಗ್ಗೆ ತಮ್ಮ
ನಿರ್ಧಾರಗಳನ್ನು ಪ್ರಕಟಿಸಿದರು.
ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ ಪೊಲೀಸರ ಕ್ರಮವನ್ನು ಖಂಡಿಸಿ ಜ.7 ರಂದು ಬೆಳಗ್ಗೆ ಗಂಟೆ 10.30 ಕ್ಕೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲಾ ಸಂಗಟನೆಗಳಿಗೂ ಸೇರಿದ ಅಂದಾಜು 2 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ದಲಿತ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದರು. ಪೊಲೀಸರು ನಡೆಸಿದ ಲಾಠಿ ಚಾರ್ಜ್ ಹಿಂದೆ ಪೇಜಾವರ ಸ್ವಾಮೀಜಿಗಳ ಕೈವಾಡವಿದೆ ಎಂದು ಆರೋಪಿಸಿದ ದಲಿತ ಮುಖಂಡರು, ಲಾಠಿ ಚಾರ್ಜ್ ನಡೆಸುವಾಗ ಸೊಂಟದ ಕೆಳಭಾಗಕ್ಕೆ ಮಾತ್ರ ಹೊಡೆಯಬೇಕೆಂಬ ನಿಯಮ ಇದ್ದರೂ, ಈ ನಿಯಮವನ್ನು ಉಲ್ಲಂಘಿಸಿ, ಪ್ರತಿಭಟನಾ ನಿರತರ ತಲೆ, ಬೆನ್ನು ಮುಂತಾದ ಸೊಂಟದ ಮೇಲಿನ ಭಾಗಗಳಿಗೂ ರಣಹದ್ದುಗಳಂತೆ ಹೊಡೆದು ಕ್ರೂರತೆ ಮೆರೆಯಲಾಗಿದೆ. ಈ ಪೊಲೀಸರಿಗೆ ಲಾಠಿಚಾರ್ಜ್ ಯಾವಾಗ, ಹೇಗೆ ನಡೆಸಬೇಕು ಎಂಬ ಬಗ್ಗೆ ಪ್ರಾಥಮಿಕ ತರಬೇತಿ ನೀಡುವ ಅಗತ್ಯವಿದೆ ಎಂದು ಹೇಳಿದರು.
ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ ದಲಿತ ಮುಖಂಡರು, ಮುಜರಾಯಿ ಇಲಾಕೆಯ ಅಧೀನದಲ್ಲಿರುವ ಯಾವೆಲ್ಲಾ ದೇವಾಲಯಗಳಲ್ಲಿ ಪಂಕ್ತಬೇಧ ಮತ್ತು ಮಡೆಸ್ನಾನ ಇದೆಯೋ ಅಲ್ಲೆಲ್ಲಾ ಇವುಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ನಿರ್ಧಿಷ್ಟ ಪ್ರಕರಣಗಳಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಐಕ್ಯತೆಯಿಂದ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಹಮ್ಮಿಕೊಳ್ಳಲಿದೆ. ಇದಕ್ಕಾಗಿ ಕೋರ್ ಕಮಿಟಿಯನ್ನು ರಚಿಸಿಕೊಳ್ಳಲಿದ್ದೇವೆ ಎಂದು ದಲಿತ ಮುಖಂಡರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸ್ಪಷ್ಟಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನಾಯಕರಾದ ಜಯನ್ ಮಲ್ಪೆ, ಸುಂದರ ಕಪ್ಪೆಟ್ಟು, ದಸಂಸ ಅಂಬೇಡ್ಕರ್ ವಾದದ ನಾಯಕರಾದ ಸುಂದರ ಮಾಸ್ತರ್, ಹೂವಪ್ಪ ಮಾಸ್ತರ್, ಸುಂದರ ಗುಜ್ಜರಬೆಟ್ಟು, ಶ್ಯಾಮರಾಜ್ ಬಿರ್ತಿ, ದಸಂಸ
ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ನಾಯಕರಾದ ಶೇಖರ ಹೆಜಮಾಡಿ, ರಮೇಶ್ ಕೋಟ್ಯಾನ್, ಪ್ರಶಾಂತ್ ತೊಟ್ಟಂ, ಸಮತಾ ಸೈನಿಕ ದಳದ ವಿಸ್ವನಾಥ ಪೇತ್ರಿ ಮೊದಲಾದವರು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *