Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ಭಾರತ ಬಂದ್: ಉಡುಪಿಯಲ್ಲಿ ಭಾಗಶಃ ಬಂದ್

ಉಡುಪಿ: ಬೆಲೆ ಏರಿಕೆ ವಿರುದ್ಧ ವಿವಿಧ ಅಖಿಲ ಭಾರತ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಭಾರತ ಬಂದ್ ಗೆ ಉಡುಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಖಾಸಗಿ ಸಿಟಿ ಮತ್ತು ಸರ್ವಿಸ್ ಹಾಗೂ ಸರಕಾರಿ ಬಸ್ ಗಳು ತಮ್ಮ ಓಡಾಟವನ್ನು ಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಇದರಿಂದಾಗಿ ಬಹುತೇಕವಾಗಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಆದರೆ ಬಾಡಿಗೆ ಮತ್ತು ಖಾಸಗಿ ವಾಹನಗಳು ಎಂದಿನಂತೆ ಓಡಾಟ ನಡೆಸಿದವು.
ಮೆಡಿಕಲ್ ಸಹಿತ ಕೆಲವು ಅಂಗಡಿ-ಮುಂಗಟ್ಟುಗಳು ಪ್ರತಿದಿನದಂತೆ ವ್ಯಾಪಾರ-ವ್ಯವಹಾರ ನಡೆಸಿದವು. ಬಹುತೇಕ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ರಾಜ್ಯ ಸರಕಾರಿ ಕಚೇರಿಗಳಲ್ಲೂ ನೌಕರರ ಹಾಜರಾತಿ ಕಡಿಮೆ ಇತ್ತು.
ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಾಯಕರು ಹಾಗೂ ಕಾರ್ಯಕರ್ತರು ಇಂದು ಬೆಳಗ್ಗೆ ಅಜ್ಜರಕಾಡಿನ ಎಸ್ ಬಿಐ, ಎಲ್ಐಸಿ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿ ಜಾಥಾ ಹೊರಟರು. ಬಳಿಕ ಹಳೆ ತಾಲೂಕು ಕಚೇರಿ ಪಕ್ಕದ ಕೆನರಾ ಬ್ಯಾಂಕ್, ಕೆ.ಎಂ.ಮಾರ್ಗ ಪಕ್ಕದ ಸಿಂಡಿಕೇಟ್ ಟವರ್, ಸರ್ವಿಸ್ ಬಸ್ ನಿಲ್ದಾಣ ಬಳಿಯ ಬಿಎಸ್ಎನ್ಎಲ್, ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಕರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು. ಮಹಿಳೆಯರ ಸಹಿತ ನೂರಾರು ಮಂದಿ ಜಾಥಾದಲ್ಲಿ ಪಾಲ್ಗೊಂಡು, ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ಉದ್ಯೋಗಾವಕಾಶಗಳನ್ನು ಉಳಿಸಿ ಹೆಚ್ಚಿಸಲು ಸೂಕ್ತ ಪ್ಯಾಕೇಜ್ ರೂಪಿಸಬೇಕು, ಕಾಮರ್ಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜ್ಯಾರಿಗೊಳಿಸಬೇಕು, ಅಸಂಘಟಿತ ವಲಯದ ಕಾರ್ಮಿಕರಿಗೆ ಶೆಡ್ಯೂಲ್ ಗಳ ವ್ಯತ್ಯಾಸವಿಲ್ಲದೆ ಸಾಮಾಜಿಕ ಸುರಕ್ಷೆ ಮತ್ತು ಅದಕ್ಕಾಗಿ ರಾಷ್ಟ್ರೀಯ ಸಾಮಾಜಿಕ ಸುರಕ್ಷಾ ನಿಧಿಯ ಸ್ಥಾಪನೆ ಹಾಗೂ ಲಾಭದಾಯಕವಾಗಿರುವ ಸಾರ್ವಜನಿಕ ರಂಗದ ಶೇರುಗಳನ್ನು ಹಿಂತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಇತ್ಯಾದಿ ಒಟ್ಟು ಹತ್ತು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸಿಐಟಿಯು, ಎಐಟಿಯುಸಿ, ಇಂಟಕ್, ಬಿಎಂಎಸ್, ಯುಟಿಯುಸಿ ಇತ್ಯಾದಿ ಕಾರ್ಮಿಕ ಸಂಘಟನೆಗಳು ಫೆ.20 ಮತ್ತು 21 ರಂದು ಎರಡು ದಿನಗಳ ಭಾರತ ಬಂದ್ ಗೆ ಕರೆ ನೀಡಿತ್ತು.
ಕಾರ್ಮಿಕ ನಾಯಕರಾದ ಅದಮಾರು ಶ್ರೀಪತಿ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಪಿ.ವಿಶ್ವನಾಥ ರೈ, ಕೆ.ವಿ.ಭಟ್, ಬಾಲಗಂಗಾಧರ ರಾವ್, ಯು.ಗುರುದತ್, ಯು.ಶಿವರಾಯ, ಶಶಿಧರ ಗೊಲ್ಲ, ಮಧುಸೂದನ ಹೇರೂರು ಮೊದಲಾದವರು ಪ್ರತಿಭಟನಾ ಜಾಥಾದ ನೇತೃತ್ವ ವಹಿಸಿದ್ದರು.
ನಾಳೆಯೂ ಭಾರತ ಬಂದ್ ಮುಂದುವರಿಯಲಿದೆ.

Leave a Reply

Your email address will not be published. Required fields are marked *