Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

70 ಶೇ. ಅತ್ಯಾಚಾರಗಳಿಗೆ ಮದ್ಯಪಾನವೇ ಕಾರಣ: ಸಚ್ಚಿದ ಾನಂದ ಹೆಗಡೆ

ಉಡುಪಿ: 70 ಶೇಕಡಾ ಅತ್ಯಾಚಾರಗಳು ಮದ್ಯಪಾನದಿಂದಾಗಿ ನಡೆಯುತ್ತವೆ. ಶೇ.60 ಕೊಲೆಯೇ ಮೊದಲಾದ ಅಪರಾಧ ಚಟುವಟಿಕೆಗಳಿಗೂ ಕುಡಿತವೇ ಕಾರಣ. ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಗೂ ಕುಡಿತವೇ ಕಾರಣ. ಜನರು ಹಾಗೂ ಮಾಧ್ಯಮಗಳು ಇಂಥ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆಯ ಬಗ್ಗೆ ಚರ್ಚೆ ನಡೆಸುತ್ತಾರೆಯೇ ಹೊರತು, ಅವುಗಳ ಮೂಲದ ಬಗ್ಗೆ ಚರ್ಚೆ ನಡೆಸುತ್ತಿಲ್ಲ. ಅಪರಾಧಕ್ಕೆ ಕಾರಣವಾಗುವ ಮೂಲದ ಬಗ್ಗೆ ಚಿಂತನೆ, ಚರ್ಚೆ ನಡೆಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಮದ ಹೆಗಡೆ ಹೇಳಿದರು.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾ.8 ರಮದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಬರಲಿರುವ ಎಲ್ಲಾ ಚುನಾವಣೆಗಳು ಮದ್ಯಮುಕ್ತವಾಗಿರಬೇಕು. ಮತದಾರರು ಮದ್ಯ ಕುಡಿದು ಮತ ಚಲಾಯಿಸಬಾರದು. ಮದ್ಯ ಕುಡಿದು ಮತ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸೋಲಿಸಿದಂತಾಗುತ್ತದೆ. ಚುನಾವಣಾ ವೆಚ್ಚ ಹೆಚ್ಚಾಗಲೂ ಮದ್ಯ ವಿತರಣೆಯೇ ಕಾರಣ. ಈ ನಿಟ್ಟಿನಲ್ಲಿ ಮಂಡಳಿ ಕರಪತ್ರ ಪ್ರಕಟಿಸಿ ವಿತರಿಸಲು ನಿರ್ಧರಿಸಿದೆ ಎಂದು ಸಚ್ಚಿದಾನಂದ ಹೆಗಡೆ ತಿಳಿಸಿದರು.
ಅಬಕಾರಿ ಆದಾಯ ಮೂಲವಾಗಬಾರದು. ಅಬಕಾರಿಯಿಂದಲೇ ಸರಕಾರಕ್ಕೆ ಆದಾಯ ಎಂಬ ಅಭಿಪ್ರಾಯ ಸರಕಾರ ನಡೆಸುವವರಲ್ಲಿದೆ. ವಾಸ್ತವ ಹಾಗಿಲ್ಲ. ಸರಕರದ ಸಂಸ್ಥೆಯೇ ಆಗಿರುವ ಬೆಂಗಳೂರಿನ ನಿಮ್ಹಾನ್ಸ್ ನಡೆಸಿದ ಅಧ್ಯಯನದಲ್ಲಿ ಅಬಕಾರಿಯಿಂದ ಸರಕಾರಕ್ಕೆ ನಷ್ಟವೇ ಆಗುತ್ತಿದೆ ಎಂಬ ಅಂಶ ಬಯಲಾಗಿದೆ. ಆರ್ಥಿಕವಾಗಿ ಮಾತ್ರವಲ್ಲ, ಮಾನವ ಸಂಪನ್ಮೂಲದ ಸದ್ಬಳಕೆಯಲ್ಲೂ ನಷ್ಟವಾಗುತ್ತಿದೆ. ಅಬಕಾರಿಯಿಂದ ಲಾಭವೆಂಬ ಸರಕಾರದ ಭಾವನೆಗೆ ಕೊಡಲಿ ಪೆಟ್ಟು ಕೊಡುವ ಕೆಲಸ ಮಂಡಳಿ ಮಾಡಲಿದೆ ಎಂದು ಹೆಗಡೆ ಹೇಳಿದರು.
ತಾನು ಭೇಟಿ ನೀಡಿದ ಊರೊಮದರಲ್ಲಿ 400 ವಿಧವೆಯರಿದ್ದಾರೆ. ಇನ್ನೊಂದು ಊರಿನಲ್ಲಿ 44 ಮನೆಗಳಿದ್ದು, ಇಲ್ಲಿ 32 ಮಂದಿ ವಿಧವೆಯರಿದ್ದಾರೆ. ಮದ್ಯಪಾನ ಮಡಿ ಸತ್ತದ್ದೇ ಇದಕ್ಕೆ ಕಾರಣ. ಮದ್ಯಪಾನದಿಂದಾಗಿ ಸತ್ತವರ, ನಡೆದ ಅಪರಾಧ ಚಟುವಟಿಕೆಗಳ ಬಗ್ಗೆ ಸರಕಾರದ ಬಳಿಯಲ್ಲಾಗಲೀ, ಪೊಲೀಸ್ ಇಲಾಕೆಯಲ್ಲಾಗಲೀ ಮಾಹಿತಿಯೇ ಇಲ್ಲವೆಮದು ಸಚ್ಚಿದಾನಮದ ಹೆಗಡೆ ಬಹಿರಂಗಪಡಿಸಿದರು.
ಮದ್ಯಪಾನದ ವಿರುದ್ಧ ಸಾವಿರಾರು ಜನರಲ್ಲಿ ಜಾಗೃತಿ ಮೂಡಿಸಿದ ಸಾಧನೆಗಾಗಿ ಡಾ.ಪಿ.ವಿ.ಭಂಡಾರಿಯವರಿಗೆ ಮಂಡಳಿಯು ಮಾ.15 ರಂದು ಸಂಜೆ 4 ಗಂಟೆಗೆ ಉಡುಪಿ ಪುರಭವನದಲ್ಲಿ ಒಂದು ಲಕ್ಷ ರು. ನಗದು ಹೊಂದಿರುವ ‘ಸಂಯಮ ಪ್ರಶಸ್ತಿ’ ನೀಡಲಿದೆ ಎಂದು ಹೆಗಡೆ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ದೇವದಾಸ ಹೆಬ್ಬಾರ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ದುಗ್ಗೇ ಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *