Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಲ್ಪೆ: ಯುವತಿ ನಾಪತ್ತೆ

ಉಡುಪಿ: ಮಲ್ಪೆ ಸಮೀಪದ ನೆರ್ಗಿ ಚೆನ್ನಬಸವೇಶ್ವರ ಭಜನಾ ಮಂದಿರದ ಬಳಿಯ ನಿವಾಸಿ ಶ್ರೀನಿವಾಸ ಸುವರ್ಣ ಎಂಬವರ ಪುತ್ರಿ ಸೌಪರ್ಣಿಕಾ (17) ಎಂಬಾಕೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ ಬಟ್ಟೆ ಬರೆ ಸಹಿತ ಮನೆ ತೊರೆದು ನಾಪತ್ತೆಯಾದ ಪ್ರಕರಣ ಮಾ.8 ರಂದು ರಾತ್ರಿ ಗಂಟೆ 7.30 ಕ್ಕೆ ನಡೆದಿದೆ.
ಐದಡಿ ಎತ್ತರದ, ಸಾಧಾರಣ ಶರೀರದ ಸೌಪರ್ಣಿಕಾ ಗೋಧಿ ಮೈ ಬಣ್ಣದವಳಾಗಿದ್ದು, ಕನ್ನಡ ಮತ್ತು ತುಳು ಭಾಷೆಗಳನ್ನು ಬಲ್ಲವಳಾಗಿದ್ಧಾಳೆ. ನಾಪತ್ತೆಯಾದ ದಿನದಂದು ಗುಲಾಬಿ ಬಣ್ಣದ ಚೂಡಿದಾರ ಧರಿಸಿದ್ದಳು. ಕಂಡವರು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.
ಈ ಹಿಂದೆ ಎರಡು ಬಾರಿ ಈಕೆ ಮನೆಯವರ ಆತಂಕಕ್ಕೆ ಕಾರಣಳಾಗಿದ್ದಳು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದಲ್ಲಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುತ್ತದೆ ಎಂಬ ಕಾರಣಕ್ಕೆ ಮನೆಯವರು ಪೊಲೀಸ್ ದೂರು ನೀಡಿರಲಿಲ್ಲ ಎನ್ನಲಾಗಿದೆ.
ಮಾ.8 ರಂದು ಮನೆ ತೊರೆದು ಹೋದವಳು ಇನ್ನು ಸಹ ಮನೆಗೆ ಮರಳದ ಕಾರಣ ಇದೀಗ ಯುವತಿಯ ತಂದೆ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *