Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪ್ರಾರ್ಥನೆಯಲ್ಲಿ ಭಾಗವಹಿಸಿ ಏಡ್ಸ್ ರೋಗ ವಾಸಿಯಾ ಯಿತಂತೆ: ಜನಾರ್ದನ ಪೂಜಾರಿ ಬಹಿರಂಗ

ಉಡುಪಿ: ಕಟ್ಟಿಂಗೇರಿಯ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಹಿಂದೂಗಳು ಹೋದರೆ ತಪ್ಪೇನು, ಅತ್ತೂರು ಚರ್ಚ್, ಉಳ್ಳಾಲ ದರ್ಗಾ, ಕುದ್ರೋಳಿ, ಕುಕ್ಕೆ, ಉಡುಪಿ ದೇವಾಲಯಗಳಿಗೆ ಇತರ ಜಾತಿ, ಮತಗಳ ಜನರು ಹರಕೆ ಹೊತ್ತು ಪ್ರಾರ್ಥನೆ ಮಾಡುವುದಿಲ್ಲವೇ. ಹೀಗೆಂದು ಪ್ರಶ್ನಿಸಿ ಮೂಡುಬೆಳ್ಳೆ ಸಮೀಪದ ಕಟ್ಟಿಂಗೇರಿ ಪ್ರರ್ಥನಾ ಮಂದಿರದ ಮೇಲೆ ಬಜರಂಗ ದಳದ ಕಾರ್ಯಕರ್ತರು ನಡೆಸಿದ ದಾಳಿಯನ್ನು ಖಂಡಿಸಿದ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರು ದಾಳಿಕೋರರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ ಕಠಿಣ ಕಾನೂನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉಡುಪಿ ಕಾಂಗ್ರೆಸ್ ಭವನದಲ್ಲಿ ಮಾ.13 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಪ್ರಾರ್ಥನಾ ಮಂದಿರ ದಾಳಿ ಪ್ರಕರಣ ಮತ್ತು ಚುನಾವಣೆ ಫಲಿತಾಂಶದ ಬಗ್ಗೆ ಸುಧೀರ್ಘ ಒಂದು ಗಂಟೆ ಕಾಲ ಪೂಜಾರಿಯವರು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಪಡಿಸಿದರು.
ಮಾಧ್ಯಮಗೋಷ್ಟಿಗಿಂತ ಮೊದಲು ತಾನು ಪ್ರಾರ್ಥನಾ ಮಂದಿರಕ್ಕೆ ಭೆಟಿ ನೀಡಿದ್ದೇನೆ. ಗಾಯಾಳುಗಳನ್ನು, ಅವರ ಮನೆಯವರನ್ನು ಮಾತನಾಡಿಸಿದ್ದೇನೆ. ಯಾರನ್ನೂ ಮತಾಂತರ ಮಾಡಿಲ್ಲ, ಮಾಡುವುದೂ ಇಲ್ಲವೆಂದು ಪ್ರಾರ್ಥನಾ ಮಂದಿರ ನಡೆಸುತ್ತಿರುವ ರೋಶನ್ ಲೋಬೊ ಸ್ಪಷ್ಟಪಡಿಸಿದ್ದಾರೆ. ಪ್ರಾರ್ಥನೆಯಲ್ಲಿ ಭಾಗವಸುವ ಕೆಲವರು ತಮ್ಮ ಮಾನಸಿಕ ನೆಮ್ಮದಿಗಾಗಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ. ಕೆಲವರು ಪ್ರಾರ್ಥನೆಯಲ್ಲಿ ಭಾಗವಹಿಸಿದ ಬಳಿಕ ರೋಗ ವಾಸಿಯಾದ ಬಗ್ಗೆ ಹೇಳಿಕೊಂಡಿದ್ದಾರೆ. ಅವರವರ ನಂಬಿಕೆ, ವಿಶ್ವಾಸ ಅವರವರದು. ಇದನ್ನು ಪ್ರಶ್ನಿಸಲು ಬಜರಂಗಿಗಳು ಯಾರು ಎಂದು ಜನಾರ್ದನ ಪೂಜಾರಿ ಪ್ರಶ್ನಿಸಿದರು.
ಮಹಿಳೆಯೊಬ್ಬರು ತನ್ನ ಜೊತೆ ಮಾತನಾಡುತ್ತಾ, ಗಂಡನಿಗೆ ಏಡ್ಸ್ ರೋಗವಿತ್ತು. ಪ್ರಾರ್ಥನೆಯಲ್ಲಿ ಭಾಗವಹಿಸಿದ ಬಳಿಕ ಗಂಡನ ಏಡ್ಸ್ ರೋಗ ವಾಸಿಯಾಯಿತು ಎಂದು ಹೇಳಿಕೊಂಡರು. ರೋಗವಿರುವವರು ವೈದ್ಯರನ್ನು ಹುಡುಕಿಕೊಂಡು ಹೋಗುವಂತೆ, ಕೆಲವರು ತಮ್ಮದೇ ಆದ ನಮಬಿಕೆಯಿಂದ ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದ ಪೂಜಾರಿ, ಕೋಮು ಪ್ರಚೋದನೆ ಮಾಡುವವರ ಮತ್ತು ಯುವಕರನ್ನು ದಾಳಿ ನಡೆಸಲು ಪ್ರೇರೇಪಿಸಿ ದಾರಿ ತಪ್ಪಿಸುವವರ ವಿರುದ್ದ ಗೂಂಡಾ ಕಾಯ್ದೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರ, ದುರಹಂಕಾರ, ಅತ್ಯಾಚಾರ, ಅನಾಚಾರಗಳಿಂದಾಗಿ ರಾಜ್ಯದಲ್ಲಿ ಬಿಜೆಪಿ ಕೊಚ್ಚಿ ಹೋಗಿ, ಕಾಂಗ್ರೆಸ್ ಗೆದ್ದಿದೆ. ಮತದಾರರು ನೀಡಿದ ಈ ತೀರ್ಪು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೂ ಪಾಠವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗಾದ ಗತಿಯೇ ಕಾಂಗ್ರೆಸ್ ಗೆ ಆಗಬಾರದೆಂದಿದ್ದರೆ, ದರ್ಪ ದುರಹಂಕಾರದಿಂದ ವರ್ತಿಸದೆ, ಕಮಿಷನ್ ಪಡೆದುಕೊಳ್ಳದೆ ಪಾರದರ್ಶಕ ಆಡಳಿತ ಕೊಡುವಂತೆ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಮಾಧ್ಯಮಗಳ ಮೂಲಕ ಪೂಜಾರಿ ನೀತಿ ಪಾಠ ಹೇಳಿದರು.
ಬಿಜೆಪಿ, ಸಂಘ ಪರಿವಾರದಲ್ಲೂ ಒಳ್ಳೆಯವರಿದ್ದಾರೆ. ಯಡಿಯೂರಪ್ಪನವರ ಭ್ರಷ್ಟ ಆಡಳಿತದಿಂದಾಗಿ ಒಳ್ಳೆಯವರು ಈ ಸಲ ಸುಮ್ಮನೆ ಕುಳಿತಿದ್ದರು. ಬಿಜೆಪಿ ಕಾರ್ಯಕರ್ತರು ತಲೆತಗ್ಗಿಸುವಂಥ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ ಕಾರಣ ಬಿಜೆಪಿ ಸೋತಿದೆ ಎಂದು ವಿಶ್ಲೇಷಿಸಿದ ಜನಾರ್ದನ ಪೂಜಾರಿ, ಬಿಜೆಪಿಯನ್ನು ಮುಗಿಸುವುದೇ ತನ್ನ ಉದ್ದೇಶವಾಗಿತ್ತು. ತನ್ನ ಉದ್ಧೇಶ ಸಾಧನೆಯಲ್ಲಿ ತಾನು ಯಶಸ್ವಿಯಾಗಿದ್ದೇನೆ ಎಂಬ ಯಡಿಯೂರಪ್ಪನವರ ಹೇಳಿಕೆ, ಯಡಿಯೂರಪ್ಪನವರ ಡಿಕ್ಟೇಟರ್ ಶಿಪ್ ವ್ಯಕ್ತಿತ್ವಕ್ಕೆ ಸಾಕ್ಷಿ. ಯಡಿಯೂರಪ್ಪ ಬಿಜೆಪಿಯನ್ನು ಮಾತ್ರ ಮುಗಿಸಿದ್ದಲ್ಲ. ಯಡಿಯೂರಪ್ಪನವರೇ ಈಗ ಇಲ್ಲದಂತಾಗಿದೆ ಎಂದರು.
ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಮೋದ್ ಮಧ್ವರಾಜ್, ಎಂ.ಎ.ಗಫೂರ್, ಅಶೋಕ್ ಕುಮಾರ್ ಕೊಡವೂರು, ಭಾಸ್ಕರ ರಾವ್ ಕಿದಿಯೂರು, ಅಲೆವೂರು ಹರೀಶ್ ಕಿಣಿ, ಶಬ್ಬೀರ್ ಅಹಮ್ಮದ್, ಸರಸು ಬಂಗೇರ ಹಾಗೂ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *