Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಉಡುಪಿ ನಗರಸಭಾ ಆಡಳಿತ ಕಾಂಗ್ರೆಸ್ ಗೆ ಹಸ್ತಾಂತರ ಆಗಿಲ್ಲ: ಅಮೃತ್ ಶೆಣೈ

ಉಡುಪಿ: ಮಾರ್ಚ್ ನಲ್ಲಿ ನಡೆದ ಉಡುಪಿ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದುಕೊಂಡಿದೆ. ಇದುವರೆಗೂ ಕಾಂಗ್ರೆಸ್ ಗೆ ಅಧಿಕಾರ ಹಸ್ತಾಂತರವಾಗಿಲ್ಲ. ಜಿಲ್ಲಾಧಿಕಾರಿಯವರೇ ಆಡಳಿತ ನಡೆಸುತ್ತಿದ್ದಾರೆ. ಆದರೆ, ನಗರಸಭಾ ವ್ಯಾಪ್ತಿಯ ನೀರಿನ ಸಮಸ್ಯೆಗೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ನಡೆಯುತ್ತಿದ್ದು, ಇದು ಮತದಾರರನ್ನು ಹಾದಿ ತಪ್ಪಿಸುವ ಯತ್ನ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಮಿತಿಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಅಮೃತ್ ಶೆಣೈ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.30 ರಂದು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಗಜೆಟ್ ನೋಟಿಫಿಕೇಶನ್ ನಂತರ ಅಧ್ಯಕ್ಷ-ಉಪಾದ್ಯಕ್ಷರ ಚುನಾವಣೆ ನಡೆಯಲಿದೆ. ಆ ಬಳಿಕವಷ್ಟೇ ಕಾಂಗ್ರೆಸ್ ಆಡಳಿತ ಜ್ಯಾರಿಯಾಗಲಿದೆ. ಆದರೂ, ಕಾಂಗ್ರೆಸ್ ನಗರಸಭಾ ಸದಸ್ಯರು ಮತದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗಳಿಗೆ
ಸ್ಪಂದಿಸುತ್ತಿದ್ದಾರೆ ಎಂದು ಶೆಣೈ ಹೇಳಿದರು.
ಯಾವುದೇ ಶಕ್ತಿಗೂ ಪ್ರಮೋದ್ ಮಧ್ವರಾಜರನ್ನು ಸೋಲಿಸಲು ಸಾಧ್ಯವಿಲ್ಲ. ಬಿಜೆಪಿ ಸೋಲುವ ಭೀತಿಯಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ಅಮೃತ್ ಶೆಣೈ ಸ್ಪಷ್ಟಪಡಿಸಿದರು.
ಯುವ ಕಾಂಗ್ರೆಸ್ ನಾಯಕರಾದ ಯತೀಶ್ ಕರ್ಕೇರ, ಅನೂಪ್ ದೇವಾಡಿಗ, ಆರೀಫ್ ರೆಹಮಾನ್ ಮುಂತಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *