Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಾಲ ಕಾರ್ಮಿಕನ ವಿಮುಕ್ತಿ

ಉಡುಪಿ: ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಮಕ್ಕಳ ರಕ್ಷಣಾ ಘಟಕ ಮತ್ತು ಸಮಾಜಕಾರ್ಯ ವಿಭಾಗದ ಕಾಲೇಜು ಉಪನ್ಯಾಸಕರುಗಳ-ವಿದ್ಯಾರ್ಥಿಗಳ ಜಂಟಿ ಆಶ್ರಯದಲ್ಲಿ ಆಗಸ್ಟ್ 17 ರಂದು ಉಡುಪಿ ತಾಲೂಕಿನ ಬಾಲಭಿಕ್ಷುಕರ ರಕ್ಷಣೆ ಹಾಗೂ ಪುನರ್ವಸತಿ ಆಂದೋಲನದ ಸಂದರ್ಭದಲ್ಲಿ ಬಾಲ
ಕಾರ್ಮಿಕನೋರ್ವನನ್ನು ಕೆಲಸದಿಂದ ವಿಮುಕ್ತಿಗೊಳಿಸಲಾಯಿತು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ 13 ವರ್ಷ ಪ್ರಾಯದ ಬಾಲಕನೋರ್ವ ‘ಆಚಾರ್ಯ ದರ್ಶಿನಿ’ ಎಂಬ ಕ್ಯಾಂಟೀನಿನಲ್ಲಿ ಕೆಲಸ ಮಡುತ್ತಿದ್ದುದು ಕಾರ್ಯಾಚರಣೆಯ ಸಮಯದಲ್ಲಿ ಕಂಡು ಬಂತು. ಕೂಡಲೇ ಈತನನ್ನು ಕೆಲಸದಿಂದ ವಿಮುಕ್ತಿಗೊಳಿಸಿ, ಕೋಟೇಶ್ವರದ
ಸ್ಫೂರ್ತಿಧಾಮ ಬಾಲಕಾರ್ಮಿಕ ವಿಶೇಷ ವಸತಿ ಶಾಲೆಯಲ್ಲಿ ಪುನರ್ವಸತಿ ನೀಡಲು ಕೇಶವ ಕೋಟೇಶ್ವರ ಅವರ ವಶಕ್ಕೆ ನೀಡಲಾಯಿತು.
ಬಾಲ ಕಾರ್ಮಿಕನ ವಯಸ್ಸಿನ ದೃಢೀಕರಣಕ್ಕೆ ಸಂಬಂಧಿಸಿ ಕ್ಯಾಂಟೀನ್ ಮಾಲೀಕರು ಇಲಾಖೆಗೆ ದಾಖಲಾತಿಯನ್ನು ನೀಡಿದ ನಂತರ ಮುಂದಿನ ಕ್ರಮ ವಹಿಸಲಾಗುವುದುನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಡುಪಿ 1ನೇ ವೃತ್ತದ ಕಾರ್ಮಿಕ ನಿರೀಕ್ಷಕ ಆರ್. ರವಿಕುಮಾರ್, 2ನೇ ವೃತ್ತದ ಕಾರ್ಮಿಕ ನಿರೀಕ್ಷಕ ಎಚ್. ರಾಮಚಂದ್ರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಪ್ರಭಾಕರ ಆಚಾರ್, ಕೇಶವ ಕೋಟೇಶ್ವರ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *