Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕ್ರೈಸ್ತ ವಿದ್ಯಾರ್ಥಿನಿಗೆ ಬುರ್ಖಾ ತೊಡಿಸಿ ಕರೆ ದೊಯ್ದು ಮಜಾ ಮಾಡಿದ ಮುಸ್ಲೀಮ್ ವಿದ್ಯಾರ್ಥಿ !

ಉಡುಪಿ: ನಗರದ ಹೊರವಲಯದಲ್ಲಿರುವ ಪ್ರತಿಷ್ಟಿತ ಖಾಸಗಿ ಕಾಲೇಜೊಂದರ ಮುಸ್ಲೀಮ್ ವಿದ್ಯಾರ್ಥಿಯೋರ್ವ ಕಾಲೇಜು ಅವಧಿಯಲ್ಲಿ ಕ್ರೈಸ್ತ ವಿದ್ಯಾರ್ಥಿನಿಯೋರ್ವಳನ್ನು ಬುರ್ಖಾ ತೊಡಿಸಿ ಹೆಬ್ರಿಗೆ ಕರೆದೊಯ್ದು ಮಜಾ ಉಡಾಯಿಸಿದ ಪ್ರಕರಣ ನಡೆದಿದ್ದು, ಇದೀಗ ಭಾರೀ ವಿವಾದಕ್ಕೆ ಗುರಿಯಾಗಿದೆ.
ವಿದ್ಯಾರ್ಥಿನಿ ಉಡುಪಿ ನಗರದ ಶ್ರೀಮಂತ ಕುಟುಂಬಕ್ಕೆ ಸೇರಿದವಳಾಗಿದ್ದು, ತಂದೆ ವಿದೇಶದಲ್ಲಿದ್ದಾರೆ. ವಿದ್ಯಾರ್ಥಿ ನಗರದ ಹೊರ ವಲಯದ ನಿವಾಸಿಯಾಗಿದ್ದು, ತಂದೆ ತಾಲೂಕು ಪಂಚಾಯತ್ ಸದಸ್ಯರು. ಇವರಿಬ್ಬರೂ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿನಿಯ ಬರ್ತ ಡೆ ಹೆಸರಲ್ಲಿ ವಿದ್ಯಾರ್ಥಿ ಆಕೆಯನ್ನು ಕರೆದೊಯ್ದು ಮಜಾ ಉಡಾಯಿಸಿದ್ದಾನೆ ಎಂದು ತಿಳಿದುಬಂದಿದೆ.
ತಿಂಗಳ ಹಿಂದೆ ಘಟನೆ ನಡೆದಿದ್ದು, ವಾರದ ಹಿಂದೆಯಷ್ಟೇ ಇತರ ವಿದ್ಯಾರ್ಥಿಗಳ ಮೂಲಕ ಬಹಿರಂಗಕ್ಕೆ ಬಂದಿದೆ. ಈ ವಿದ್ಯಾರ್ಥಿಯ ಸಹೋದರಿ ಇದೇ ಕಾಲೇಜಿನಲ್ಲಿ
ಕಲಿಯುತ್ತಿದ್ದಾಳೆ. ವಿಷಯ ಬಹಿರಂಗಕ್ಕೆ ಬಂದ ಬೆನ್ನಿಗೆ ಕಾಲೇಜಿನಲ್ಲಿ ವ್ಯಾಪಕ ಚರ್ಚೆಯಾಗಿದ್ದು, ವಿದ್ಯಾರ್ಥಿಯ ವಿರುದ್ಧ ವಿದ್ಯಾರ್ಥಿ ಸಮೂಹ ಆಕ್ರೋಶ
ವ್ಯಕ್ತಪಡಿಸತೊಡಗಿದೆ.
ಈ ಕಾಲೇಜಿನಲ್ಲಿ ಮುಸ್ಲೀಮ್ ವಿದ್ಯಾರ್ಥಿಗಳಂತೆ ಮುಸ್ಲೀಮ್ ವಿದ್ಯಾರ್ಥಿನಿಯರೂ ಕಲಿಯುತ್ತಿದ್ದಾರೆ. ಆದರೆ, ಮುಸ್ಲೀಮ್ ವಿದ್ಯಾರ್ಥಿಗಳು ಮಾತ್ರ ಗುಪ್ತ ಅಜೆಂಡಾದ ಭಾಗ ಎಂಬಂತೆ ಒಂದು ಗುರಿ ಇರಿಸಿ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿನಿಯರನ್ನೇ ಪ್ರೀತಿಸುವ ನಾಟಕವಾಡುವುದು ಮತ್ತು ಈ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿನಿಯರನ್ನು ಮಜಾ ಉಡಾಯಿಸಲು ಅಲ್ಲಿ ಇಲ್ಲಿ ಕರೆದೊಯ್ಯುವುದು ನಿರಂತರವಾಗಿ ನಡೆಯುತ್ತಿದೆ ಎನ್ನಲಾಗಿದೆ.
ಕಳೆದ ವರ್ಷ ಮುಸ್ಲೀಮ್ ವಿದ್ಯಾರ್ಥಿಯೋರ್ವ ಹಿಂದೂ ವಿದ್ಯಾರ್ಥಿನಿಯನ್ನು ಕರೆದೊಯ್ದು ಮಜಾ ಉಡಾಯಿಸಿದ್ದು ಬೆಳಕಿಗೆ ಬಂದಿತ್ತು. ಆಗ ಸಂಘ ಪರಿವಾರದ ಸಂಘಟನೆಯೊಂದರ ಕೆಲವರು ವಿದ್ಯಾರ್ಥಿನಿಯ ಮನೆಗೆ ಹೋಗಿ ಆಕೆಗೆ ಬುದ್ದಿವಾದ ಹೇಳಿ, ಆಕೆಯ ಹೆತ್ತವರಿಗೆ ವಿಷಯ ತಿಳಿಸಿ ಜಾಗ್ರತೆ ವಹಿಸುವಂತೆ ಮುನ್ನೆಚ್ಚರಿಕೆ ಹೇಳಿದ್ದು ಸುದ್ದಿಯಾಗಿತ್ತು. ಕೆಲವು ತಿಂಗಳ ಹಿಂದೆ ಮುಸ್ಲೀಮ್ ವಿದ್ಯಾರ್ಥಿಯೋರ್ವ ಕ್ರೈಸ್ತ
ವಿದ್ಯಾರ್ಥಿನಿಯೋರ್ವಳನ್ನು ಪ್ರೀತಿಸುವ ನಾಟಕವಾಡಿ ಕಾಲೇಜು ಬಿಡಿಸಿ ತನ್ನೊಂದಿಗೆ ಕರೆದೊಯ್ದು ಎರಡು ದಿನ ಉಳಿಸಿಕೊಂಡು ಮತಾಂತರ ಮಾಡಲು ಯತ್ನಿಸಿದ ಘಟನೆ ನಡೆದಿತ್ತು. ಮತಾಂತರದ ಅಂತಿಮ ಹಂತದಲ್ಲಿ ಜೋಡಿ, ವಿದ್ಯಾರ್ಥಿನಿ ಕಡೆಯವರ ಕೈಗೆ
ಸಿಕ್ಕಿಬಿದ್ದಿತ್ತು. ಬಳಿಕ ವಿದ್ಯಾರ್ಥಿನಿಯನ್ನು ಬಚಾವ್ ಮಾಡಲಾಗಿತ್ತು.

Leave a Reply

Your email address will not be published. Required fields are marked *