Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಾಷ್ಟ್ರಧ್ವಜಕ್ಕೆ ಅಪಮಾನ: 7 ನೇ ದಿನವೂ ಮುಂದುವರಿ ಕೆ !

ಉಡುಪಿ: ತಾಲೂಕಿನಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಷ್ಟ್ರಧ್ವಜ ಅಪಮಾನ ಪ್ರಕರಣ ಆರನೇ ದಿನವಾದ ಇಂದೂ ಸಹ ಹಾಗೆಯೇ ಮುಂದುವರಿದಿದೆ.

ಉಡುಪಿ ತಾಲೂಕಿನ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ-ಪಡುಬೆಳ್ಳೆ ರಸ್ತೆಯ ‘ವನಸೌರಭ’ ಮನೆ ಮುಂಭಾಗದ ರಸ್ತೆಯ ಬದಿಯಲ್ಲಿ ರಾತ್ರಿಯಾದರೂ ರಾಷ್ಟ್ರಧ್ವಜ ಅವರೋಹಣ ಮಾಡದೆ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಖಾಸಗಿ ವ್ಯಕ್ತಿಯೊಬ್ಬರು ರಾಷ್ಟ್ರಧ್ವಜಕ್ಕೆ ಅಪಮಾನವೆಸಗುತ್ತಿರುವ ಪ್ರಕರಣ ನಡೆಯುತ್ತಿದೆ.

ಇದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮಾರ್ಚ್ 18ರಿಂದ ಪ್ರತಿದಿನ ಉಡುಪಿ ಜಿಲ್ಲಾಡಳಿತದ ಅನೇಕ ಮಂದಿ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆಯಾದರೂ, ಆರು ದಿನಗಳಾದರೂ ಸಹ ಸಂಬಂದಧಿಸಿದ ಯಾವೊಬ್ಬ ಅಧಿಕಾರಿಯೂ ರಾಷ್ಟ್ರಧ್ವಜ ಅಪಮಾನ ಪ್ರಕರಣದ ವಿರುದ್ಧ ಯಾವುದೇ ರೀತಿಯ ಕ್ರಮವನ್ನೂ ಕೈಗೊಳ್ಳದೆ ಕಡೆಗಣಿಸಿಕೊಂಡು ಬರುತ್ತಿದ್ದಾರೆ.

ನೌಕದಳದ ನಿವೃತ್ತ ಕೊಮೊಡೋರ್ ಜೆರೋಮ್ ಕಸ್ತಲಿನೊ ಎಂಬವರ ‘ವನಸೌರಭ’ ಎಂಬ ಹೆಸರಿನ ಮನೆ ಮೂಡುಬೆಳ್ಳೆ- ಪಡುಬೆಳ್ಳೆ ರಸ್ತೆಯಲ್ಲಿದ್ದು, ಕಸ್ತಲಿನೊ ಅವರು ತಮ್ಮ ಮನೆ ಮುಂಭಾಗದ ರಸ್ತೆ ಬದಿಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ರಾಷ್ಟ್ರಧ್ವಜವೊಂದನ್ನು ಆರೋಹಣ ಮಾಡಿದ್ದರು.ಆದರೆ, ಬಳಿಕ ಧ್ವಜ ಅವರೋಹಣ ಮಾಡದೆ ಹಾಗೆಯೇ ಬಿಟ್ಟುಬಿಟ್ಟಿದ್ದರು. ರಾಷ್ಟ್ರಧ್ವಜವನ್ನು ಸೂರ್ಯಾಸ್ಥವಾದರೂ ಅವರೋಹಣ ಮಾಡದೇ ತಿಂಗಳಿಂದ ಹಾಗೆಯೇ ಬಿಟ್ಟುಬಿಟ್ಟಿರುವುದು ಭಾರತದ ಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ರಾಷ್ಟ್ರಧ್ವಜಕ್ಕೆ ನಿರಂತರವಾಗಿ ಅಪಮಾನವಾಗುತ್ತಿರುವ ಬಗ್ಗೆ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ ಅವರು ಮಾರ್ಚ್ 18ರಂದು ರಾತ್ರಿ ಶಿರ್ವ ಸಬ್ ಇನ್ಸ್ ಪೆಕ್ಟರ್ ಅಶೋಕ್, ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ಹಾಗೂ ಉಡುಪಿ ಜಿಲ್ಲಾ ನಿಯಂತ್ರಣ ಕಚೇರಿಗೆ ಮೌಕಿಕ ದೂರು ನೀಡಿದ್ದರು.

ಸ್ಥಳೀಯ ಪೊಲೀಸ್ ಅಧಿಕಾರಿಗಳು ರಾಷ್ಟ್ರಧ್ವಜ ಅಪಮಾನ ಪ್ರಕರಣದ ವಿರುದ್ಧ ಯಾವುದೇ ಕನಿಷ್ಟ ಕ್ರಮಗಳನ್ನೂ ಕೈಗೊಳ್ಳದ ಕಾರಣ ಮಾ.19ರಂದು ಮಧ್ಯಾಹ್ನ ಎಸ್ಪಿ ಡಾ.ಬೋರಲಿಂಗಯ್ಯ ಹಾಗೂ ಅಪರ ಜಿಲ್ಲಾಧಿಕಾರಿ ಕುಮಾರ್ ಅವರಿಗೆ ಮೌಖಿಕ ದೂರು ನೀಡಿದ್ದರು. ರಾತ್ರಿ ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್ ಅವರ ಗಮನಕ್ಕೂ ತರಲಾಗಿತ್ತು.

ವಿಷಯ, www.udupibits.in ಮತ್ತು ‘ಜಯಕಿರಣ’ ದಿನಪತ್ರಿಕೆ ಮಾ.20ರ ಸಂಚಿಕೆಯಲ್ಲಿ ವರದಿಯಾಗಿತ್ತು. ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕವೂ ಸಂಬಂಧಿಸಿದ ಅಧಿಕಾರಿಗಳು ರಾಷ್ಟ್ರಧ್ವಜ ಅವರೋಹಣ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಧ್ವಜಸಂಹಿತೆಯನ್ನು ಸಾರಾ ಸಗಟು ಉಲ್ಲಂಘನೆ ಮಾಡುತ್ತಿರುವ ಪ್ರಕರಣ ಮುಂದುವರಿಯಿತು ಹಾಗೂ ಕರ್ನಾಟಕ ಜನಪರ ವೇದಿಕೆಯು ಪ್ರತಿದಿನವೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮೊಬೈಲ್ ಸಂದೇಶ ಕಳುಹಿಸಲಾರಂಭಿಸಿತು.

ಮಾ.24ರ ರಾತ್ರಿ ವಿಷಯವನ್ನು ಕರ್ನಾಟಕ ಜನಪರ ವೇದಿಕೆಯು ಮತ್ತೆ ಶಿರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್, ಕಾಪು ಸರ್ಕಲ್ ಇನ್ಸ್ ಪೆಕ್ಟರ್, ಕಾರ್ಕಳ ಎಎಸ್ಪಿ, ಜಿಲ್ಲಾ ಹೆಚ್ಚುವರಿ ಎಸ್ಪಿ, ಎಸ್ಪಿ, ತಹಶಿಲ್ದಾರ್, ಜಿಲ್ಲಾಧಿಕಾರಿ ಹಾಗೂ ಪಶ್ಚಿಮ ವಲಯದ ಐಜಿಪಿ ಇವರ ಗಮನಕ್ಕೆ ತಂದಿದೆ. ಮಾತ್ರವಲ್ಲ, ಈ ವಿಷಯವನ್ನು ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತಂದಿದೆ.

ಆದರೆ, ಇದುವರೆಗೂ ಯಾವುದೇ ಕ್ರಮ ಆಗಿಲ್ಲ. ರಾಷ್ಟ್ರಧ್ವಜ ಅಪಮಾನ ಪ್ರಕರಣ ಮುಂದುವರಿದಿದೆ.

Leave a Reply

Your email address will not be published. Required fields are marked *