Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಕ್ಟೋಬರ್ 19: ಉಡುಪಿಯಲ್ಲಿ ಡಾ.ಶರತ್ ಪರ ಬೃಹತ್ ಪ್ರತಿಭಟನಾ ಮೆರವಣಿಗೆ, ಅನಿರ್ಧಿಷ್ಠಾವಧಿ ಸತ್ಯಾಗ್ರಹ

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತಿನಿಧಿ ವಿಭಾಗದಲ್ಲಿ ಕಳೆದ 12 ವರ್ಷಗಳಿಮದ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದ ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಅವರನ್ನು ಅಸಂವಿಧಾನಿಕವಾಗಿ ಅಮಾನತು ಮಾಡಿದ್ದೂ ಅಲ್ಲದೆ, ಅಮಾನತುಗೊಳಿಸಿ ಒಂದು ವರ್ಷ ಕಳೆದರೂ, ಇಲಾಖಾ ತನಿಖೆಯನ್ನೂ ನಡೆಸದೆ, ಅಮಾನತು ಆದೇಶವನ್ನೂ ಹಂತೆಗೆದುಕೊಳ್ಳದೆ, ಜೀವನಾಂಶವನ್ನೂ ಸರಿಯಾಗಿ ನೀಡದೆ ಅವರ ಮಾನವಹಕ್ಕುಗಳನ್ನು ಕಸಿದುಕೋಲ್ಳುತ್ತಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ಅಕ್ಟೋಬರ್ 19ರಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಬಳಿಕ ಅಜ್ಜರಕಾಡಿನಲ್ಲಿ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಶಿಬಿರ ನಡೆಸಲು ಡಾ.ಶರತ್ ಹಿತೈಷಿಗಳ ಸಭೆ ನಿರ್ಧರಿಸಿದೆ.

ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿಯವರ ನೇತೃತ್ವದಲ್ಲಿ ಅಕ್ಟೋಬರ್ 15ರಂದು ಸಂಜೆ ನಗರದ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ನಡೆದ ಡಾ.ಭಂಡಾರಿ ಬೆಂಬಲಿಗರ ಮತ್ತು ಡಾ.ಶರತ್ ಕುಮಾರ್ ರಾವ್ ಅಭಿಮಾನಿಗಳ ಸಭೆಯಲ್ಲಿ ಡಾ.ಶರತ್ ಅಮಾನತು ಪ್ರರಕಣದ ಬಗ್ಗೆ ಚರ್ಚಿಸಿ, ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಕೆಲವು ಹತ್ವದ ತೀರ್ಮಾನಗಳನ್ನು
ತೆಗೆದುಕೊಳ್ಳಲಾಯಿತು.

ಆರೋಗ್ಯ ಸಚಿವ ಯು.ಟಿ.ಖಾದರ್ (ಮೊಬೈಲ್ ನಂ. 9448383919) ಹಾಗೂ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಎನ್. ಶಿವಶೈಲಂ (ಮೊಬೈಲ್ ನಂ. 9448990310) ಅವರಿಗೆ ಡಾ.ಶರತ್ ಪರವಾಗಿ ಎಸ್.ಎಂ.ಎಸ್.ಅಭಿಯಾನ ಪ್ರಾರಂಭಿಸಲು ನಿರ್ಧರಿಸಲಾಯಿತು. ನಗರದ ಸಿಟಿ ಬಸ್ ನಿಲ್ದಾಣದ ಬಳಿಯ ಸದಾನಂದ ಟವರ್ಸ್ ಲ್ಲಿರುವ ಮಾನಸ ಕ್ಲಿನಿಕ್ ನ್ನು ಹೋರಾಟಕ್ಕೆ ಪೂರಕವಾಗಿ ಸಭೆ ಇತ್ಯಾದಿ ನಡೆಸಲು ಹೋರಾಟಗಾರರ ಕಚೇರಿಯನ್ನಾಗಿ ಪರಿವರ್ತಿಸುವುದಾಗಿಯೂ ಡಾ.ಭಂಡಾರಿ ಘೋಷಿಸಿದರು. ಆಸ್ಪತ್ರೆಗಳ ಪ್ರಯೋಗಾಲಯ ಹಗರಣದ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಪ್ರಾಜೆಕ್ಟ್ ಹಾಕಿ ಸಾವ್ಝನಿಕರಿಗೆ ಮಾಹಿತಿ ನೀಡುವ ಮೂಲಕ ಜನಜಾಗೃತಿ ರೂಪಿಸಲು ತಾನು ಸಿರ್ದಧನಿರುವುದಾಗಿಯೂ ಡಾ.ಪಿ.ವಿ.ಭಂಡಾರಿ ಪ್ರಕಟಿಸಿದರು.

ಅಕ್ಟೋಬರ್ 11ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಸೇರಿ, ಇಲ್ಲಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದು, ಬಳಿಕ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಅಥವಾ ಅಜ್ಜರಕಾಡು ಗಾಂಧಿ ಪಾರ್ಕ್ ಮುಂಭಾಗದಲ್ಲಿ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಶಿಬಿರ ನಡೆಸುವುದು. ಈ ಶಿಬಿರದಲ್ಲಿ ಡಾ.ಪಿ.ವಿ.ಭಂಡಾರಿಯವರು ಪ್ರತಿಭಟನಾರ್ಥವಾಗಿ ಉಚಿತವಾಗಿ ಚಿಕಿತ್ಸೆ ಮತ್ತು ಔಷಧಗಳನ್ನು ನೀಡುವ ಮೂಲಕ ಸತ್ಯಾಗ್ರಹ ಕ್ಲಿನಿಕ್ನ್ನೂ ಆರಂಭಸುವುದು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.

ಅಮಾನತು ಎಂದರೆ ಶಿಕ್ಷೆಯಲ್ಲ ಎಂದು ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ ಹೇಳುತ್ತಾರೆ. ಆದರೆ, ಮಾನ-ಮರ್ಯಾದೆ ಇರುವವರಿಗೆ ಅಮಾನತು ಕೂಡಾ ಶಿಕ್ಷೆಯೇ ಆಗುತ್ತದೆ. ಡಾ.ಶರತ್ ಕುಮಾರ್ ರಾವ್ ವಿರುದ್ಧ ನಡೆಯುತ್ತಿರುವುದು ಸರಕಾರಿ ಪ್ರಾಯೋಜಿತ ಹಿಂಸೆಯಾಗಿದೆ. ತನಗೆ ಯಾರ ಮೇಲೆಯೂ ವಯುಕ್ತಿಕ ಧ್ವೇಷವಿಲ್ಲ. ಆದರೆ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಈ ವ್ಯವಸ್ಥೆಯ ಬಗ್ಗೆ ಸಿಟ್ಟಿದೆ ಎಂದು ಡಾ.ಪಿ.ವಿ.ಭಂಡಾರಿ ಹೇಳಿದರು.

ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಬೇಕು, ಆರೋಗ್ಯ ಸಚಿವರು ಜಿಲ್ಲೆಗೆ ಬಂದಾಗಲೆಲ್ಲ ಮುತ್ತಿಗೆ ಹಾಕಬೇಕು, ಡಾ.ಶರತ್ ಅವರನ್ನು ಬೆಂಬಲಿಸಿ ರಕ್ತದಾನ ಶಿಬಿರ ಹಮ್ಮಬೇಕು, ಆರೋಗ್ಯ ಸಚಿವರಿಗೆ ಪ್ರತಿಯೊಬ್ಬರು ತಮ್ಮ ತಮ್ಮ ದೇಹದಿಂದ ರಕ್ತ ತೆಗೆದು ಬಾಟಲಿಯಲ್ಲಿ ಕಳುಹಿಸಿಕೊಡಬೇಕು, ಡಾ.ಶರತ್ ಅವರ ಅಮಾನತು ನಾಗರಿಕ ಸಮಾಜಕ್ಕೆ ಮಾಡಿದ ಅಪಮಾನ, ಶಾಸಕ ಪ್ರಮೋದ್ ಮಧ್ವರಾ, ಸಚಿವ ವಿನಯ ಕುಮಾರ್ ಸೊರಕೆ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ಆಯೋಜಿಸಬೇಕು ಎಂಬಿತ್ಯಾದಿ ಅಭಿಪ್ರಾಯಗಳನ್ನು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಮಂಡಿಸಿದರು.

ಫಾದರ್ ವಿಲಿಯಂ ಮಾರ್ಟಿಸ್, ಕೆ.ಎಂ.ಉಡುಪ, ಮನೋಹರ ಭಂಡಾರ್ಕರ್, ಜಯಕರ ಶೆಟ್ಟಿ ಇಂದ್ರಾಳಿ, ಕಾಪು ಲೀಲಾಧರ ಶೆಟ್ಟಿ, ಭಾಸ್ಕರ ರೈ ಬ್ರಹ್ಮಾವರ, ಸುರೇಂದ್ರ ನಾಯಕ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜನನಿ ದಿವಾಕರ ಶೆಟ್ಟಿ, ಗೀತಾ ಶೇಟ್, ವಿಶು ಶೆಟ್ಟಿ ಅಂಬಲಪಾಡಿ, ವಾಲ್ಟರ್ ವಿಲಿಯಂ ಪಿಂಟೊ, ಪುರುಷೋತ್ತಮ ಸಾಲಿಯಾನ್, ಟಿ.ಅಂಗಾರ, ರಾಘವೇಂದ್ರ ಪ್ರಭು ಕರ್ವಾಲು, ನಾಗಭೂಷಣ ಶೇಟ್, ಸಂಜೀವ ವಂಡ್ಸೆ ಮೊದಲಾದವರ ಸಹಿತ ಇನ್ನೂರಕ್ಕೂ ಅಧಿಕ ಮಂದಿ ಪೂರ್ವಭಾವೀ ಸಭೆಯಲ್ಲಿ ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *