Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಹಾಭಾರತದಲ್ಲಿ ಬೃಹನ್ನಳೆಯನ್ನು ಮುಂದಿಟ್ಟು ಯುದ್ಧ ಮಾಡಿದಂತೆ, ಡಾ.ಶರತ್ ವಿರುದ್ಧ ಸ್ತ್ರೀಯನ್ನು ಮುಂದಿರಿಸಿ ಅಧಿಕಾರಿಗಳಿಂದ ಅನ್ಯಾಯ: ಫಾದರ್ ವಿಲಿಯಂ ಮಾರ್ಟಿಸ್ ವ್ಯಾಖ್ಯಾನ !

ಉಡುಪಿ: ಮಹಾಭಾರತ ಯುದ್ಧದಲ್ಲಿ ಬೃಹನ್ನಳೆಯನ್ನು ಮುಂದಿಟ್ಟುಕೊಂಡು ಯುದ್ಧ ಮಾಡಿದಂತೆ, ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ಸ್ತ್ರೀ ಒಬ್ಬಾಕೆಯನ್ನು ಮುಂದಿರಿಸಿಕೊಂಡು ಸರಕಾರಿ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ಫಾದರ್ ವಿಲಿಯಂ ಮಾರ್ಟಿಸ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮರ್ ಅವರನ್ನು ಅಸಂವಿದಾನಿಕವಾಗಿ ಅಮಾನತು ಮಾಡಿದ್ದೂ ಅಲ್ಲದೆ, ಕಳೆದ ಒಂದು ವರ್ಷ ಒಂದು ತಿಂಗಳಿಂದಲೂ ತನಿಖೆಯನ್ನೂ ನಡೆಸದೆ, ಜೀವಾನಾಂಶವನ್ನೂ ಸರಿಯಾಗಿ ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ ಇಂದು (19.10.2014) ಬೆಳಗ್ಗೆ ಉಡುಪಿ ನಗರದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಡಾ.ಶರತ್ ಅವರಿಗೆ ಅನ್ಯಾಯವಾಗಿದೆ ಎನ್ನುವುದನ್ನು ಲಭ್ಯವಿರುವ ದಾಖಲೆಗಳೇ ಸ್ಪಷ್ಟಪಡಿಸುತ್ತದೆ. ಹೀಗೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು. ಸರಕಾರಿ ಅಧಿಕಾರಿಗಳು ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುವ ಪ್ರಕ್ರಿಯೆಯೂ ಈ ಪ್ರಕರಣದಲ್ಲಿ ನಡೆದಿದೆ. ಇನ್ನಾದರೂ ಡಾ.ಶರತ್ ಅವರಿಗೆ ಸರಕಾರ ನ್ಯಾಯ ಒದಗಿಸಿಕೊಡಬೇಕು ಎಂದು ಫಾ.ವಿಲಿಯಂ ಮಾರ್ಟಿಸ್ ಒತ್ತಾಯಿಸಿದರು.

ಉಡುಪಿ ತಾಲೂಕು ಪಂಚಾಯತ್ ಸದಸ್ಯ ಸತ್ಯಾನಂದ ನಾಯಕ್, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಸ್.ಎಸ್.ತೋನ್ಸೆ, ಹಿರಿಯ ಸಮಾಜ ಸೇವಕರಾದ ಹೂವಯ್ಯ ಸೇರ್ವೇಗಾರ್ ಉಪ್ಪೂರು, ಮಾಹಿತಿ ಹಕ್ಕು ಹೋರಾಟಗಾರರಾದ ಕೆ.ಎಸ್.ಉಪಾಧ್ಯ, ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಆರ್.ಕಾಮತ್, ಹಿರಿಯ ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡಕ, ನಗರ ಸಭಾ ಸದಸ್ಯ ಮಹೇಶ್ ಠಾಕೂರ್, ಲಕ್ಷ್ಮೀನಾರಾಯಣ ಉಪಾಧ್ಯ, ವಾಸುದೇವ ಕಾಮತ್ ಕುಂದಾಪುರ, ರಕ್ತದಾನಿ ದಿವಾಕರ ಖಾರ್ವಿ, ಉಪನ್ಯಾಸಕ ಮಂಜಪ್ಪ ಗೋಣಿ, ಸಮಾಜ ಸೇವಕರಾದ ರಾಘವೇಮದ್ರ ಪ್ರಭು ಕರ್ವಾಲು, ರೊನಾಲ್ಡ್ ಕ್ಯಾಸ್ತಲಿನೋ ಶಂಕರಪುರ, ಶೇಖರ ಶೆಟ್ಟಿ ಹೆಬ್ರಿ, ಪ್ರಭಾತ್ ಕಲ್ಕೂರ, ನಾಗರಾಜ್, ಚಂದ್ರಶೇಖರ ಶೆಟ್ಟಿ ವಂಡ್ಸೆ, ಡಾ.ದೀಪಕ್ ಮಲ್ಯ, ಡಾ.ಕಿರಣ್ ಆಚಾರ್ಯ ಸಹಿತ ಅನೇಕ ಮಂದಿ ಪ್ರಮುಖರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.

ಚಿತ್ರ : ಶ್ರೀರಾಮ ದಿವಾಣ.

Leave a Reply

Your email address will not be published. Required fields are marked *