Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ದೇಶಮಂಗಲ ಕೃಷ್ಣ ಕಾರಂತ ಜನ್ಮಶತಾಬ್ದಿ: ಯಕ್ಷಗಾನ ತಾಳಮದ್ದಳೆ, ಅನಂತಪುರ ಸದಾಶಿವರಿಗೆ ಸಮ್ಮಾನ

ಕುಂಬಳೆ(ಕಾಸರಗೋಡು): ಇಲ್ಲಿಗೆ ಸಮೀಪದ ಎಡನಾಡುವಿನ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನವು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಮುಜುಂಗಾವಿನಲ್ಲಿ ಯಕ್ಷಗಾನದ ಪ್ರಖ್ಯಾತ ಅರ್ಥಧಾರಿಗಳೂ, ಕಲಾ ವಿಮರ್ಶಕರೂ ಆಗಿದ್ದ ದೇಶಮಂಗಲ ದಿ.ಕೃಷ್ಣ ಕಾರಂತ ಅವರ ಜನ್ಮ ಶತಾಬ್ದಿಯ ಅಂಗವಾಗಿ ನ.16ರಂದು ಯಕ್ಷಗಾನ ತಾಳಮದ್ದಳೆ ಮತ್ತು ಸಮ್ಮಾನ ಕಾರ್ಯಕ್ರಮವನ್ನು ಆಯೋಜಿಸಿತ್ತು.

udghaatane copy
ಹಿರಿಯ ಮೃದಂಗವಾದಕರಾದ ಸದಾಶಿವ ಅನಂತಪುರ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ವಿದ್ವಾನ್ ಕೆ.ಬಾಬು ರೈ ಸೂರ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮಾನ ಸಮಾರಂಭವನ್ನು ಶ್ರೀ ಕ್ಷೇತ್ರ ಮುಜುಂಗಾವಿನ ಕಾರ್ಯದರ್ಶಿ ಕೆ.ಎಂ.ಸುಬ್ರಾಯ ಭಟ್ ಅವರು ಉದ್ಘಾಟಿಸಿದರು.

diwana shivashankara bhat prasthaavane copy
ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾದ್ಯಾಪಕರಾದ ಪ್ರೊ.ಎ.ಶ್ರೀನಾಥ್ ಅವರು ದೇಶಮಂಗಲ ಕೃಷ್ಣ ಕಾರಂತರನ್ನು ಸ್ಮರಿಸಿದರು. ಭಾಗವತರಾದ ಸಿರಿಬಾಗಿಲು ರಾಮಕಷ್ಣ ಮಯ್ಯ, ಜಯರಾಮ ಕಾರಂತ ದೇಶಮಂಗಲ, ಪತ್ರಕರ್ತರೂ, ಯಕ್ಷಗಾನ ಅರ್ಥಧಾರಿಯೂ ಆದ ವಿ.ಜಿ.ಕಾಸರಗೋಡು, ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ದಿವಾಣ ಶಿವಶಂಕರ ಭಟ್, ಸಂಚಾಲಕರಾದ ಅವಿನಾಶ ಕಾರಂತ ಪಾಡಿ, ಶ್ರೀಮತಿ ರೋಹಿಣಿ ಎಸ್.ದಿವಾಣ ಮೊದಲಾದವರು ಉಪಸ್ಥಿತರಿದ್ದರು.

aasaktharu copy
ಸಭಾ ಕಾರ್ಯಕ್ರಮದ ಬಳಿಕ ‘ಭೃಗು ಶಾಪ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಪಟ್ಲ ಸತೀಶ್ ಶೆಟ್ಟಿ, ಚಂಡೆ ಮತ್ತು ಮದ್ದಳೆಗಾರರಾಗಿಗೋಪಾಲಕೃಷ್ಣ ನಾವಡ ಮಧೂರು, ಲವ ಕುಮಾರ್ ಐಲ ಹಾಗೂ ಮುರಳಿ ಮಾಧವ ಮಧೂರು, ಅರ್ಥಧಾರಿಗಳಾಗಿ ಉಜಿರೆ ಅಶೋಕ್ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಓಟೆಪಡ್ಪು ವಿಷ್ಣು ಶರ್ಮ, ದಿವಾಣ ಶಿವಶಂಕರ ಭಟ್, ಶೇಣಿ ವೇಣುಗೋಪಾಲ ಭಟ್ ಹಾಗೂ ಜಿ.ಕೆ.ಅಡಿಗ ಕೂಡ್ಲು ಭಾಗವಹಿಸಿದ್ದರು.

thaalamaddale

Leave a Reply

Your email address will not be published. Required fields are marked *