Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನವೆಂಬರ್ 21ರಿಂದ www.udupibits.in ನಲ್ಲಿ ಡಾ.ಪಿ.ವಿ.ಭಂಡಾರಿಯವರ ‘ಮನೋವಿಶ್ವಾಸ’ ಆರಂಭ

# ಖ್ಯಾತ ಮನೋವೈದ್ಯರೂ, ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗ ಆಸ್ಪತ್ರೆಯ ನಿರ್ದೇಶಕರೂ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕೊಡಮಾಡುವ ಪ್ರತಿಷ್ಠಿತ ‘ಸಂಯಮ’ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ.ಪಿ.ವಿ.ಭಂಡಾರಿಯವರು ನಮ್ಮ www.udupibits.in (ಅಂತರ್ಜಾಲದ ಸುದ್ದಿ ವಾಹಿನಿ) ಗೆ ಪ್ರತೀ ವಾರ ಅಂಕಣ ಬರಹ ಬರೆಯಲು ಒಪ್ಪಿಕೊಳ್ಳುವ ಮೂಲಕ ದೊಡ್ಡ ಮನಸ್ಸು ಮೆರೆದಿದ್ದಾರೆ ಎಂದು ತಿಳಿಸಲು udupibits.in ಬಳಗ ಅತೀವ ಸಂತೋಷಪಡುತ್ತದೆ.

ಡಾ.ಪಿ.ವಿ.ಭಂಡಾರಿಯವರ ಅತ್ಯಮೂಲ್ಯವೂ, ಅತ್ಯುಪಯುಕ್ತವೂ ಆದ ಬರಹಗಳು ‘ಮನೋವಿಶ್ವಾಸ’ ಎಂಬ ಶಿರ್ಷಿಕೆಯಡಿಯಲ್ಲಿ ನವೆಂಬರ್ 21ರ ಶುಕ್ರವಾರದಿಂದ, ಪ್ರತೀ ಶುಕ್ರವಾರವೂ ನಿಮ್ಮ www.udupibits.in ನಲ್ಲಿ ಮೂಡಬರಲಿದೆ. ಡಾ.ಭಂಡಾರಿಯವರಿಗೆ ಕೃತಜ್ಷತೆಗಳು, ಅಭಿನಂದನೆಗಳು.

ಶ್ರೀರಾಮ ದಿವಾಣ, ಸಂಪಾದಕರು, www.udupibits.in 

Leave a Reply

Your email address will not be published. Required fields are marked *