Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ದಿನಗೂಲಿ ನೌಕರರ ಮುಷ್ಕರ 4ನೇ ದಿನಕ್ಕೆ: ಕ್ಯಾಂಪ್ಕೋ ಚಟುವಟಿಕೆ ಅಸ್ತವ್ಯಸ್ತ

ಬದಿಯಡ್ಕ(ಕಾಸರಗೋಡು): ವೇತನ ಹೆಚ್ಚಳಗೊಳಿಸಬೇಕೆಂದು ಆಗ್ರಹಿಸಿ ಕ್ಯಾಂಪ್ಕೋದ ದಿನಕೂಲಿ ನೌಕರರು ನಡೆಸುತ್ತಿರುವ ಮುಷ್ಕರವನ್ನು ಇತ್ಯರ್ಥಗೊಳಿಸಲು ಜಿಲ್ಲಾ ಕಾರ್ಮಿಕ ಇಲಾಖಾ ಕಾರ್ಯಾಲಯದಲ್ಲಿ ನ.19ರಂದು ನಡೆಸಿದ್ದ ವಿಶೇಷ ಸಭೆಯಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳಲಾಗದೆ ನ.25ರಂದು ಎರಡನೇ ಸುತ್ತಿನ ಸಭೆ ನಡೆಸಲು ತೀರ್ಮಾನಿಸುವುದರೊಂದಿಗೆ ಕ್ಯಾಂಪ್ಕೋ ಬಾರಿ ಹಿನ್ನಡೆ ಅನುಭವಿಸಿದೆ.

ದಿನಕೂಲಿ ಕಾರ್ಮಿಕರು ನಡೆಸುತ್ತಿರುವ ಎರಡನೇ ಹಂತದ ಮುಷ್ಕರವು ಇಂದು ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ಚಟುವಟಿಕೆಗಳು ಅಸ್ತವ್ಯಸ್ತಗೊಂಡಿದೆ. ಕ್ಯಾಂಪ್ಕೋ ಎರಡು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ನಡೆಸಬೇಕಿದೆ. ಆದರೆ 2009ರಿಂದ 2012ರ ವರೆಗೆ ನಿಬಂಧನೆಗೊಳಪಟ್ಟ ವೇತನ ಹೆಚ್ಚಳಗೊಳಿಸಿ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿದೆ. ಕಾಸರಗೋಡು ವ್ಯಾಪ್ತಿಯ ಐದು ಕ್ಯಾಂಪ್ಕೋ ಶಾಖೆಗಳ ದಿನಕೂಲಿ ನೌಕರರ ವೇತನ ಪರಿಷ್ಕರಣೆ ಬಗ್ಗೆ 4 ಬಾರಿ ಸಭೆ ಸೇರಿ 500 ರು. ಕನಿಷ್ಠ ವೇತನವನ್ನು ಒಪ್ಪದಿದ್ದುದರಿಂದ ಕನಿಷ್ಠ 400 ರು. ಬೇಡಿಕೆಯನ್ನು ಕ್ಯಾಂಪ್ಕೋ ತಳ್ಳಿಹಾಕಿದೆ. ಈ ನಡುವೆ ಕಾರ್ಮಿಕರು ಹಾಗೂ ಯೂನಿಯನ್ ನೇತಾರರ ಸಹಕಾರದೊಂದಿಗೆ ಏಕರೂಪದ ವೇತನ ಪರಿಷ್ಕರಣೆ ಆಗಬೇಕೆಂಬುದು ಆಡಳಿತ ಮಂಡಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಕೇರಳದ ತ್ರಿಶೂರು ಶಾಖೆಯಲ್ಲಿ ಪ್ರಸ್ತುತ ನೀಡಲಾಗುತ್ತಿರುವ 400 ರು.ಗಳ ಕನಿಷ್ಠ ವೇತನ ನೀಡುವಿಕೆಯನ್ನು ಮರೆಮಾಚಿ ಕರ್ನಾಟಕದ ಕನಿಷ್ಠ ವೇತನ ನೀತಿಯನುಸರಿಸಲು ಶ್ರಮಿಸುತ್ತಿರುವುದು ಕಾರ್ಮಿಕರನ್ನು ರೊಚ್ಚಿಗೆಬ್ಬಿಸಿದೆ. ಕಳೆದ ಅಕ್ಟೋಬರ್ 17ರಿಂದ 26ರ ವರೆಗೆ ನಡೆಸಿದ್ದ ದಿನಕೂಲಿ ಕಾರ್ಮಿಕರ ಮುಷ್ಕರವನ್ನು ಕಾರ್ಮಿಕ ಸಂಘಟನೆಗಳು ಮುಷ್ಕರ ಪತ್ರ ನೀಡಿ ಮೊದಲೇ ತಿಳಿಸಿದ್ದರೂ ಕ್ಯಾಂಪ್ಕೋ ಕಾನೂನು ಬಾಹಿರವೆನ್ನುತ್ತಿರುವುದು ಖಂಡನೀಯವೆಂದು ದಿನಕೂಲಿ ನೌಕರರ ಸಂಘಗಳು ತಿಳಿಸಿದೆ. ಈ ನಡುವೆ ಅಲರ್ಜಿ, ಅಸ್ತಮಾ ಮೊದಲಾದ ರೋಗಗಳ ಸಹಿತ ಅಪಾಯಕಾರಿ ರಾಸಾಯನಿಕಗಳ ಬಳಕೆಯು ಅಡಿಕೆ ಸಂಸ್ಕರಣೆಯಲ್ಲಿ ಬಳಸಲ್ಪಡುವುದಕ್ಕೆ ಮುಂಜಾಗ್ರತಾ ಕ್ರಮಗಳಿಗೆ ಆಸ್ಪದವೀಯದಿರುವುದು ಕಾರ್ಮಿಕ ಸಂಘಟನೆಗಳು ಅಸಮಾಧಾನಕ್ಕೆ ಕಾರಣವಾಗಿದೆ.

ವಿಶೇಷವೆಂದರೆ, ಸಹಕಾರಿ ಭಾರತಿಯ ಉಸ್ತುವಾರಿಯಲ್ಲಿರುವ ಕ್ಯಾಂಪ್ಕೋದ ಎದುರಾಗಿ ಕಾಸರಗೋಡಿನ ಕ್ಯಾಂಪ್ಕೋ ಶಾಖೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ದಿನಕೂಲಿ ನೌಕರರ ಸಂಘಟನೆಯಲ್ಲಿ ಪ್ರಮುಖವಾಗಿರುವುದು ಸಹಕಾರಿ ಭಾರತಿಯದೇ ವಿಭಾಗಕ್ಕೊಳಪಟ್ಟ ಮತ್ತೊಂದು ಸಂಘಟನೆಯಾಗಿರುವುದು ಆಶ್ಚರ್ಯವನ್ನುಂಟುಮಾಡಿದೆ.

ಕಾರ್ಮಿಕರ ಪರವಾಗಿ ಮಾತ್ರ ಸಂಘಟನೆ ಕಾರ್ಯನಿರ್ವಹಿಸುತ್ತದೆ. ಅದರಲ್ಲಿ ಪಕ್ಷ ರಾಜಕೀಯವಿರುವುದಿಲ್ಲ. ಕಾರ್ಮಿಕರ ಹಿತಕ್ಕೆ ತೊಂದರೆ ಬಂದಾಗ ಸ್ವಂತ ಮಾತೃ ಸಂಘಟನೆಯನ್ನು ಪ್ರಶ್ನಿಸುವ ಹೊಣೆ ಇದರ ಮೇಲಿದೆಯೆಂದು ಬಿ.ಎಂ.ಎಸ್.ಜಿಲ್ಲಾಧ್ಯಕ್ಷ ಪಿ.ಮುರಳೀದರನ್ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ವಿಶ್ವ ಲೇಬರ್ ಅಸೋಸಿಯೇಶನ್ ನಿಯಮಾನುಸಾರ ಓರ್ವ ಕಾರ್ಮಿಕ ಗರಿಷ್ಠ 50 ಕಿಲೋವಿಗಿಂತ ಅಧಿಕ ಭಾರ ಹೊರುವಂತಿಲ್ಲ. ಆದರೆ ಕ್ಯಂಪ್ಕೋದಲ್ಲಿ 70-75 ಕಿಲೋವರೆಗೆ ಬಾರ ಹೊರಿಸಿ ಕಾರ್ಮಿಕರನ್ನು ದುರುಪಯೋಗಪಡಿಸುವುದನ್ನು ಸಂಘಟನೆ ಸಹಿಸದೆಂದು ಅವರು ಸ್ಪಷ್ಟಪಡಿಸಿದರು. ವೇತನ ಪರಿಷ್ಕರಣೆ ಸಹಿತ ಇತರ ಬೇಡಿಕೆಗಳಿಗೆ ಕೂಡಲೇ ಕ್ಯಾಂಪ್ಕೋ ಸ್ಪಂದಿಸಬೇಕೆಂದು ಅವರು ಆಗ್ರಹಿಸಿದರು.

ಎಐಟಿಯುಸಿ ಹಾಗೂ ಐಎನ್ಟಿಯುಸಿ ಕಾಮರ್ಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗಿಯಾಗಿವೆ.

ಚಿತ್ರದಲ್ಲಿ: ಬದಿಯಡ್ಕ ಕ್ಯಾಂಪ್ಕೋದ ಎದುರು ಇಂದು ಕಾಮರ್ಿಕ ಸಂಘಟನೆಗಳು ಮುಷ್ಕರ ನಿರತರಾಗಿರುವುದು.

One Comment

  1. vmcv.vengu@gmail.com'

    v.venkatachalapathy

    May 31, 2018 at 8:14 pm

    ದಲಿತ ದೌರ್ಜನ್ಯ ಮುಚ್ಚಿಹಾಕಲು ಪೊಲೀಸ್ ಯತ್ನ: ಸೇಡಿನ ಕ್ರಮವಾಗಿ ಪತ್ರಕರ್ತರ ವಿರುದ್ಧ ಕೇಸು ದಾಖಲಿಸುವ ಸಂಚು !

Leave a Reply

Your email address will not be published. Required fields are marked *