Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗ್ರೈಂಡರ್ ಗೆ ಚೂಡಿದಾರ್ ಶಾಲು ಸಿಲುಕಿ ಗೃಹಿಣಿ ಮೃತ್ಯು !

ಉಪ್ಪಳ(ಕಾಸರಗೋಡು): ಗ್ರೈಂಡರ್ಗೆ ಚೂಡಿದಾರದ ಶಾಲು ಸಿಲುಕಿ ಗೃಹಿಣಿಯೋರ್ವಳು ಮೃತಪಟ್ಟ ದುರ್ಘಟನೆ ಪೈವಳಿಕೆ ಸಮೀಪದ ನೂತಿಲ ಎಂಬಲ್ಲಿ ಸಂಭವಿಸಿದೆ.

ನೂತಿಲ ನಿವಾಸಿ ಅಶ್ರಫ್ ಎಂಬವರ ಪತ್ನಿ ನಫೀಸಾ(35) ಅಡುಗೆಗೆಂದು ಮಧ್ಯಾಹ್ನ ಗ್ರೈಂಡರ್ನಲ್ಲಿ ತೆಂಗಿನಕಾಯಿ ಅರೆಯುತ್ತಿದ್ದಾಗ ಚೂಡಿದಾರದ ಶಾಲು ಆಕಸ್ಮಿಕವಾಗಿ ಗ್ರೈಂಡರ್ ಚಕ್ರಕ್ಕೆ ಸಿಲುಕಿ ಕುತ್ತಿಗೆ ಬಿಗಿದು ಉಸಿರು ಕಟ್ಟಿದ ಘಟನೆ ನಡೆಯಿತೆನ್ನಲಾಗಿದೆ.

ಬೊಬ್ಬೆ ಕೇಳಿ ಮನೆಯವರು ಕೂಡಲೇ ಗ್ರೈಂಡರ್ ಸ್ವಿಚ್ ಸಂಪರ್ಕವನ್ನು ಕಡಿತಗೊಳಿಸಿ ನಫೀಸಾರನ್ನು ಉಪ್ಪಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಿಲ್ಲ. ಮೃತ ನಫೀಸಾ ಅವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *