Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಹಕ್ಕು ಪತ್ರಗಳಿಗೆ ಕಾಯುತ್ತಿರುವ ಕುಟುಂಬಗಳು: ನಿರ್ಗತಿಕರಿಗೆ ಶೀಘ್ರ ಪರಿಹಾರ ಲಭಿಸುವುದೇ ?

ಮಂಜೇಶ್ವರ(ಕಾಸರಗೋಡು): ಕೇರಳ ಅಭಿವೃದ್ದಿ ಯೋಜನೆಯಡಿ 2004-05 ರಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ನ ವಿವಿಧೆಡೆಗಳ ಭೂರಹಿತರನ್ನು ಗುರುತಿಸಿ 54 ಕುಟುಂಬಗಳಿಗೆ ಪ್ರತಿ ಕುಟುಂಬಗಳಿಗೆ ತಲಾ 4 ಸೆಂಟ್ಸ್ ನಂತೆ ಸ್ಥಳ ನೀಡಲು ಅಂದಿನ ಗ್ರಾಮ ಪಂಚಾಯತ್ ನಿರ್ಧರಿಸಿತ್ತು.

ಬಳಿಕ, ಮಂಜೇಶ್ವರದ ಗೇರುಕಟ್ಟೆ ಪಳ್ಳ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವನಿಂದ 1 ಎಕ್ರೆ 80 ಸೆಂಟ್ಸ್ ಸ್ಥಳವನ್ನು ಗ್ರಾಮ ಪಂಚಾಯತ್ ಖರೀದಿಸಿತ್ತು. ಆ ನಿವೇಶನದಲ್ಲಿ 54 ನಿರ್ಗತಿಕ ಭೂರಹಿತರಿಗೆ 4 ಸೆಂಟ್ಸ್ ನಂತೆ ಹಂಚಿಕೆಮಾಡಿ ಕೊಡಲಾಗಿತ್ತು. ಬಳಿಕ ಗ್ರಾಮ ಪಂಚಾಯತ್ ಭವನ ನಿರ್ಮಾಣ ಯೋಜನೆಯಡಿ 25ರಿಂದ 35 ಸಾವಿರ ರು. ಮತ್ತು ಇ.ಎಂ.ಎಸ್ ಭವನ ನಿರ್ಮಾಣ ಯೋಜನೆಯಡಿ 75 ಸಾವಿರದಿಂದ 1 ಲಕ್ಷ ರು. ಅನುದಾನಗಳು ಲಭಿಸಿದ್ದವು.

ಈ ಪೈಕಿ 19 ಮನೆಗಳ ನಿರ್ಮಾಣ ಕಾಮಗಾರಿ ಪೂರ್ತಿಗೊಂಡಿರುತ್ತದೆ. ಉಳಿದ ಮನೆಗಳ ಕಾಮಗಾರಿ ಆರ್ಥಿಕ ಮುಗ್ಗಟ್ಟಿನಿಂದ ನೆನೆಗುದಿಗೆ ಬಿದ್ದಿರುತ್ತದೆ. ಸರಕಾರದ ಅನುದಾನದಿಂದ ಸ್ಥಳ, ಹಣಕಾಸು ಸಹಾಯಗಳು ಕೆಲವು ಕುಟುಂಬಳಿಗೆ ಸಿಕ್ಕಿವೆಯಾದರೂ ಸ್ಥಳದ ದಾಖಲಾತಿ ಪತ್ರ (ಪಟ್ಟಾ) ಲಭಿಸದಿರುವುದು ಆಶ್ರಿತರ ಗೊಂದಲಕ್ಕೆ ಕಾರಣವಾಗಿದೆ. ಸ್ಥಳ ಭೂರಹಿತರಿಗೆ ದೊರಕಿದ ದಿನಾಂಕದಿಂದ ತೀರ್ವೆ (ಟ್ಯಾಕ್ಸ್) ಪಾವತಿಸುತ್ತಾ ಬರುತ್ತಿದ್ದು, ಇದೀಗ ಕುಂಜತ್ತೂರಿನ ಗ್ರಾಮಾಧಿಕಾರಿ ಹೊಸತೊಂದು ನಿಯಮದ ಮೂಲಕ ಬೇರೊಂದು ಸಮಸ್ಯೆಗೆ ಕಾರಣರಾಗಿದ್ದಾರೆ.

ದಾಖಲೆ ಪತ್ರಗಳಿಲ್ಲದ ಸ್ಥಳಕ್ಕೆ ಕಾನೂನು ರೀತ್ಯಾ ತೀರ್ವೆ ಕಟ್ಟುವಂತಿಲ್ಲವೆಂದು ಆದೇಶ ಹೊರಡಿಸಿ ಸ್ಥಳದ ಹಕ್ಕನ್ನೇ ಪ್ರಶ್ನಾರ್ಹಗೊಳಿಸಿದ್ದಾರೆ. ಇದರಿಂದ ಮತ್ತಷ್ಟು ಗೊಂದಲಗೊಂಡ ಬಡ ನಿರ್ಗತಿಕ ಕುಟುಂಬಗಳ ದೈನ್ಯ ಕೂಗಿಗೆ ಕೊನೆಗೂ ಸ್ಪಂದಿಸಿ ಕಾರ್ಯಪ್ರವೃತ್ತರಾದ ಮಂಜೇಶ್ವರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರಾಮಾಧಿಕಾರಿಗಳಿಗೆ ಸೂಚನೆ ನೀಡಿ ತಾತ್ಕಾಲಿಕವಾಗಿ ತೀರ್ವೆ ಪಡೆಯುವಂತೆ ಮಾಡಿರುವರು.

hakkupatrakkaagi-2

ಆದರೂ ತಾತ್ಕಾಲಿಕವಾಗಿ ತೀರ್ವೆ ಪಾವತಿಸಿ ಸಿಕ್ಕಿದ ಕೈಯಗಲ ಆಶ್ರಯವನ್ನು ಶೀಘ್ರ ತಮ್ಮ ಹೆಸರಿಗೇ ದೃಢಪಡಿಸಿಕೊಳ್ಳುವಲ್ಲಿ ಸಹಾಯಕವಾಗುವಲ್ಲಿ ತಾತ್ಕಾಲಿಕ ವ್ಯವಸ್ಥೆ ಎಷ್ಟು ಸಹಕಾರಿಯಾದೀತೆಂಬುದು ಯಕ್ಷ ಪ್ರಶ್ನೆಯಾಗಿದ್ದರೂ, ಬೀಸಿದ ದೊಣ್ಣೆಯಿಂದ ಒಮ್ಮೆಗೆ ಪಾರಾದ ಸಂತಸ ಇಲ್ಲಿ ನಿರ್ಗತಿಕರಲ್ಲಿಲ್ಲ. ಶಾಶ್ವತವಾಗಿ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಾಸಕರು ತಮ್ಮ ಕಾಲಾವಧಿ ಕೊನೆಗೊಳ್ಳುವ ಕೆಲವೇ ತಿಂಗಳುಗಳಿನ್ನು ಬಾಕಿಯಿರುವ ಕೊನೆಯ ಕ್ಷಣದಲ್ಲಾದರೂ ಶ್ರಮಿಸಿ ನ್ಯಾಯ ದೊರಕಿಸುವರೇ ಎಂದು ಕಾದು ನೋಡುವಂತಿಲ್ಲ. ಯಾಕೆಂದರೆ ಕಳೆದ 9 ವರ್ಷಗಳಿಂದ ಕಾಯುತ್ತಾ ಕುಳಿತ ಈ ಬಡ ಕುಟುಂಬಗಳಿಗೆ ಬದಲಾಗುತ್ತಾ ಹೊಸ ರೂಪದಲ್ಲಿ ಬರುವ ಕಾನೂನು ಬೆದರಿಕೆಯಾಗಿ ಕಾಡುತ್ತಿದೆ.

ಚಿತ್ರದಲ್ಲಿ: ದಾಖಲೆ ಪತ್ರಕ್ಕಾಗಿ ಪರದಾಡುತ್ತಾ ನ್ಯಾಯಕ್ಕಾಗಿ ಕಾಯುತ್ತಿರುವ ಕುಟುಂಬ).

Leave a Reply

Your email address will not be published. Required fields are marked *