Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಆರೋಗ್ಯ ಇಲಾಖೆಯಿಂದ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಅರ್ಜಿದಾರರಿಂದ ಅಪೀಲ್

ಉಡುಪಿ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ (ಎನ್.ಶಿವಶೈಲಂ, ಐಎಎಸ್) ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ಹಕ್ಕು ಕಾಯ್ದೆ-2005ನ್ನು ಉಲ್ಲಂಘಿಸಿದ ಪ್ರಕರಣ ನಡೆದಿದೆ.

ಉಡುಪಿಯ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು, ಆರೋಗ್ಯ ಇಲಾಖೆ ಅನುಷ್ಠಾನ ಮಾಡುತ್ತಿರುವ ಮಹತ್ವದ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಮತ್ತು ದಾಖಲಾತಿಗಳನ್ನು ಕೋರಿ ಅಕ್ಟೋಬರ್ 13ರಂದು ಮಾಹಿತಿ ಹಕ್ಕು ಕಾಯ್ದೆಯಂತೆ ಅರ್ಜಿ ಸಲ್ಲಿಸಿದ್ದರು.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವ ಸರಕಾರದ ಅಧೀನ ಕಾರ್ಯದರ್ಶಿ (ವೃಂದ ಮತ್ತು ನೇಮಕಾತಿ) ಚಂದ್ರಹಾಸ ಗಂ.ತಾಳೂಕರ ಅವರು ಶ್ರೀರಾಮ ದಿವಾಣ ಅವರ ಮೂಲ ಅರ್ಜಿಯನ್ನು ಅಕ್ಟೋಬರ್ 23ರಂದು ಕಲಂ 6 (3)ರ ಪ್ರಕಾರ ಇಲಾಖಾ ಆಯುಕ್ತರು (ಪಿ.ಎಸ್.ವಸ್ತ್ರದ್, ಐಎಎಸ್) ಹಾಗೂ ಆಯುಕ್ತರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಆಡಳಿತಾಧಿಕಾರಿ (ಸಾಮಾನ್ಯ)ಯವರು ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ (ರಿ)ಯ ಅಪರ ನಿರ್ದೇಶಕರಿಗೆ ವರ್ಗಾಯಿಸಿದ್ದರು.

ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ ಒಂದು ತಿಂಗಳು ಕಳೆದರೂ, ಆರೋಗ್ಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ಅರ್ಜಿಯನ್ನು ವರ್ಗಾಯಿಸಿ ತಿಂಗಳೊಂದು ಕಳೆದರೂ, ಕೋರಿದ ಮಾಹಿತಿ ಮತ್ತು ದಾಖಲೆಗಳನ್ನು ಕಾಯ್ದೆಯಂತೆ ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನೀಡದ ಕಾರಣ, ಅರ್ಜಿದಾರರಾದ ಶ್ರೀರಾಮ ದಿವಾಣ ಅವರು, ನವೆಂಬರ್ 17ರಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಮೇಲ್ಮನವಿ ಪ್ರಾಧಿಕಾರಕ್ಕೆ ಒಂದನೇ ಅಪೀಲ್ ಮಾಡಿದ್ದಾರೆ.

Leave a Reply

Your email address will not be published. Required fields are marked *