Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ದಂಡ ಪಾವತಿಸದ ಹಿನ್ನೆಲೆ: ಉಡುಪಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಕೋರಿಕೆ ತಿರಸ್ಕಾರ !

ಉಡುಪಿ: ಉಡುಪಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ವಾರ್ಷಿಕ ನಿರ್ವಹಣೆಗೆ 2 ಲಕ್ಷ ರು. ಅನುದಾನ ಒದಗಿಸುವಂತೆ ಕೋರಿ ಉಡುಪಿ ಬಳಕೆದಾರರ ವೇದಿಕೆ ಮತ್ತು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಕೆ.ದಾಮೋದರ ಐತಾಳರು ಅಕ್ಟೋಬರ್ 27ರಂದು ಸಲ್ಲಿಸಿದ ಮನವಿಯನ್ನು ಉಡುಪಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಅನುಮೋದಿಸದೆ ‘ವಿಲೆ ಇಟ್ಟ’ ವಿದ್ಯಾಮಾನ ನಡೆದಿದೆ.

ಈ ಹಿಂದೆ ಗ್ರಾಹಕ ಮಾಹಿತಿ ಕೇಂದ್ರಕ್ಕೆ ಮಂಜೂರಾದ ಅನುದಾನದ ಬಳಕೆ ಕುರಿತು ಮಾಹಿತಿ ಹಕ್ಕು ಕಾಯ್ದೆ-2005ರಂತೆ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಮಾಹಿತಿ ನೀಡದೆ ಇದ್ದ ಕಾರಣಕ್ಕಾಗಿ ರಾಜ್ಯ ಮಾಹಿತಿ ಆಯೋಗವು 50 ಸಾವಿರ ರು. ದಂಡ ವಿಧಿಸಿದೆ. ಈ ದಂಡದ ಮೊತ್ತವನ್ನು ಪಾವತಿಸದೆ ಇದ್ದ ಕಾರಣ ನಿಗದಿತ ಮೊತ್ತವನ್ನು ಕಂದಾಯ ಬಾಕಿಯಂತೆ ವಸೂಲಿ ಮಾಡಲು ಆದೇಶಿಸಿರುವ ಹಿನ್ನೆಲೆಯಲ್ಲಿ ಮತ್ತೆ ಗ್ರಾಹಕ ಮಾಹಿತಿ ಕೇಂದ್ರದ ವಾರ್ಷಿಕ ನಿರ್ವಹಣಾ ವೆಚ್ಚಕ್ಕೆ 2 ಲಕ್ಷ ರು. ಅನುದಾನ ಮಂಜೂರು ಮಾಡುವ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಕಡಿಯಾಳಿಯ ಕೆ.ಎಸ್.ಉಪಾಧ್ಯ ಅವರು ಕೆಲವೊಂದು ಅಗತ್ಯ ಮಾಹಿತಿಗಳನ್ನು ಕೋರಿ ಗ್ರಾಹಕ ಮಾಹಿತಿ ಕೇಂದ್ರಕ್ಕೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು. ಆದರೆ ಗ್ರಾಹಕ ಮಾಹಿತಿ ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವ ಕೇಂದ್ರದ ಸಂಚಾಲಕ ಕೆ.ದಾಮೋದರ ಐತಾಳರು ಅರ್ಜಿದಾರರಿಗೆ ಮಾಹಿತಿ ನೀಡದೆ ಕಾಯ್ದೆಯನ್ನು ಉಲ್ಲಂಘಿಸಿದ್ದರು.

RTI

ಈ ಪ್ರಕರಣದ ವಿಚಾರಣೆಯು ಕರ್ನಾಟಕ ಮಾಹಿತಿ ಆಯೋಗದ ತ್ರಿಸದಸ್ಯ ಪೀಠದಲ್ಲಿ ನಡೆದು ಅಂತಿಮವಾಗಿ ಆಯೋದವು ದಾಮೋದರ ಐತಾಳರಿಗೆ 50 ಸಾವಿರ ರು.ದಂಡ ವಿಧಿಸಿ ತೀರ್ಪು ನೀಡಿದ್ದರು. ಆಯೋಗ ತೀರ್ಪು ನೀಡಿದರೂ, ತೀರ್ಪನ್ನು ಮಾನ್ಯ ಮಾಡದೆ ದಂಡ ಪಾವತಿಸದೆ ಐತಾಳರು ಕಡೆಗಣಿಸಿಕೊಂಡೇ ಬಂದಿದ್ದರು. ಇದೇ ಕಾರಣದಿಂದ ಕೊನೆಗೆ 50 ಸಾವಿರ ರು. ದಂಡವನ್ನು ಕಂದಾಯ ಬಾಕಿ ವಸೂಲಿ ಮಾಡುವ ಪ್ರಕ್ರಿಯೆಯಂತೆ ವಸೂಲಿ ಮಾಡುವ ಪ್ರಕ್ರಿಯೆಗೆ ಜಿಲ್ಲಾಡಳಿತ ಚಾಲನೆ ನೀಡಿತ್ತು. ಈ ಪ್ರಕ್ರಿಯೆ ಇದೀಗ ಚಾಲನೆಯಲ್ಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *