Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಾರು ಅಪಘಾತ: ಯುವಕ ಮೃತ್ಯು – ಐವರಿಗೆ ಗಾಯ

ಮುಳ್ಳೇರಿಯಾ(ಕಾಸರಗೋಡು): ನೂತನ ಅಂಗಡಿಯ ಉದ್ಘಾಟನಾ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದಾಗ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮುಗುಚಿ ಬಿದ್ದ ಪರಿಣಾಮವಾಗಿ ಯುವಕನೋರ್ವ ಮೃತಪಟ್ಟು, ಐವರು ಗಾಯಗೊಂಡ ಘಟನೆ ಮುಳ್ಳೇರಿಯಾ ಸಮೀಪದ ಪೂವಡ್ಕ ತಿರುವಿನಲ್ಲಿ ಸಂಭವಿಸಿದೆ.

ಕಾಸರಗೋಡು ಬಾರಿಕ್ಕಾಡು ಸಮೀಪದ ಪಾಂಬಾಚಿಕಡವು ನಿವಾಸಿ ದಿ.ಆನಂದ-ಸುಶೀಲಾ ದಂಪತಿಗಳ ಪುತ್ರ ವಿನು ಯಾನೆ ವಿನಯಚಂದ್ರ (25)ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ. ವಿನಯಚಂದ್ರ, ಕಾಸರಗೋಡಿನ ವಿದ್ಯಾನಗರದಲ್ಲಿ ಹಣ್ಣು-ಹಂಪಲು ವ್ಯಾಪಾರ ನಡೆಸುತ್ತಿದ್ದರು.

vinayachandra

ಮುಳ್ಳೇರಿಯಾ ಪೇಟೆಯಲ್ಲಿರುವ ಸಹಕಾರಿ ಕಾಲೇಜು ಬಳಿ ವಿನಯಚಂದ್ರರ ಸಹೋದರ ರಾಜು ಅವರು ನೂತನವಾಗಿ ಗ್ಲಾಸ್ ಆಂಡ್ ಹಾರ್ಡ್ ವೇರ್ ಅಂಗಡಿಯನ್ನು ಆರಂಭಿಸಿದ್ದರು. ಅಂಗಡಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇತರರೊಂದಿಗೆ ಮರಳುತ್ತಿದ್ದಾಗ ದಾರಿಯ ಮಧ್ಯೆ ಪೂವಡ್ಕ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದು ಅಪಘಾತ ನಡೆಯಿತು.

ಅಪಘಾತದಲ್ಲಿ ಕಾರು ಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನೊಳಗಿದ್ದವರನ್ನು ಪ್ರಯಾಸದಿಂದ ಎಳೆದು ತೆಗೆಯಬೇಕಾಯಿತು. ಕಾರಿನಲ್ಲಿದ್ದ ವಿನಯಚಂದ್ರ, ಚೆರ್ಕಳ ಸಮೀಪದ ಪಾಡಿ ವಡಂಬಳೆಯ ಕೆ.ಗೋಪಿ(32), ಶಿವಮೊಗ್ಗದ ಬಸವರಾಜು(30), ಕಾರಡ್ಕ ನೆಚ್ಚಿಪಡ್ಪುವಿನ ಟಿ. ಕುಮಾರನ್(55), ಇವರ ಪತ್ನಿ ಮಾಧವಿ(48) ಹಾಗೂ ಇವರ ಮೊಮ್ಮಗ ಅಭಿನವ್ (ಒಂದೂವರೆ ವರ್ಷದ ಮಗು)ಗಾಯಗೊಂಡರು.

ಊರವರು ಅಪಘಾತದಲ್ಲಿ ಸಿಲುಕಿದವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ವಿನಯಚಂದ್ರರ ಪ್ರಾಣವನ್ನು ರಕ್ಷಿಸಲಾಗಲಿಲ್ಲ. ಗಾಯಾಳುಗಳ ಪೈಕಿ ಕೆ.ಗೋಪಿಯವರ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿದೆ. ಅಪಘಾತದ ಬಗ್ಗೆ ಆದೂರು ಪೋಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಚಿತ್ರದಲ್ಲಿ: ವಿನಯಚಂದ್ರ ಹಾಗೂ ಅಪಘಾತಕ್ಕೀಡಾದ ಕಾರು.

Leave a Reply

Your email address will not be published. Required fields are marked *