Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿ ನೋಂದಣಿ ಮತ್ತು ಮುದ್ರಾಂಕ ಕಚೇರಿಯಲ್ಲಿ ನಾಪತ್ತೆಯಾಗುತ್ತಿವೆ, ಅಮೂಲ್ಯ ಕಡತಗಳು !

ಉಡುಪಿ: ಉಡುಪಿಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಯಲ್ಲಿನ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ, ಹೋಣೆಗೇಡಿತನ ಮತ್ತು ಒಳ ವ್ಯವಹಾರಗಳಿಂದಾಗಿ ಕಚೇರಿಯ ಭದ್ರತೆಯಲ್ಲಿರಬೇಕಾದ ಅನೇಕ ಅಮೂಲ್ಯ ಕಡತಗಳೇ ನಾಪತ್ತೆಯಾಗುತ್ತಿರುವ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಸಾವಿರಾರು ವಿವಾಹ, ಆಸ್ತಿ, ಸಂಘ, ಸಮಿತಿ, ಟ್ರಸ್ಟ್, ಪ್ರತಿಷ್ಠಾನಗಳು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೋಂದಣಿಯಾಗುತ್ತಿರುತ್ತವೆ. ಅರ್ಧಕ್ಕರ್ಧ ನೋಂದಣಿ ಪ್ರಕ್ರಿಯೆಗಳನ್ನು ಸರಿಯಾದ ದಾಖಲಾತಿಗಳಿಲ್ಲದೆಯೇ ಇಲ್ಲಿ ಮಾಡಲಾಗುತ್ತಿದೆ. ಕೆಲವು ಮಂದಿ ನಿಧೀಷ್ಟ ಬ್ರೋಕರ್ ಗಳ ಮೂಲಕ ನಡೆಯುವ ಹಾಗೂ ಭ್ರಷ್ಟ ಮತ್ತು ಪ್ರಭಾವೀ ಉದ್ಯಮಿಗಳ ಹಾಗೂ ರಾಜಕಾರಣಿಗಳ ಸೂಚನೆಯಂತೆ ನಡೆಯುವ ಬಹಳಷ್ಟು ನೋಂದಣಿ ಪ್ರಕ್ರಿಯೆಯ ಹಿಂದೆ ಲಕ್ಷಾಂತರ ರು. ಅವ್ಯವಹಾರಗಳೂ ಇಲ್ಲಿ ನಡೆದಿರುತ್ತವೆ.

ಆದರೆ, ಈ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಮದಿಗಳು ಇಬ್ಬರೂ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಯಾವುದೇ ಹಗರಣಗಳು ಬಹಿರಂಗಕ್ಕೆ ಬರುವುದೇ ಇಲ್ಲ. ಅಪರೂಪಕ್ಕೆ ಎಂಬಂತೆ ಒಂದೋ ಎರಡೋ ಪ್ರಕರಣಗಳು ಬಯಲಾದರೂ, ಅದನ್ನು ಎಲ್ಲರೂ ಸೇರಿಕೊಂಡು ಅಷ್ಟೇ ವ್ಯವಸ್ಥಿತವಾಗಿ, ಚಾಕಚಾಕ್ಯತೆಯ ಮೂಲಕ ಮುಚ್ಚಿ ಹಾಕುವ ಕೆಲಸ ಮಾಡಿ ಕೈತೊಳೆದುಕೊಂಡು ಬಿಡುತ್ತಾರೆ.

ಉಡುಪಿಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಅಮೂಲ್ಯ ಕಡತಗಳು ನಾಪತ್ತೆಯಾಗುತ್ತವೆ, ಮಾತ್ರವಲ್ಲ, ಉದ್ಧೇಶಪೂರ್ವಕವಾಗಿಯೂ ನಾಪತ್ತೆ ಮಾಡಿಬಿಡುತ್ತಾರೆ ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು. ಬಳಿಕ ಈ ನಾಪತ್ತೆ ಪ್ರಕರಣ ಬೆಳಕಿಗೆ ಬರುವ ಹಂತದಲ್ಲಿ, ಅನಿವಾರ್ಯವಾಗಿ ‘ಆ ಕಡತವನ್ನು ಅಧಿಕೃತವಾಗಿ ನಾಶಪಡಿಸಲಾಗಿದೆ’ ಎಂಬ ಮತ್ತೊಂದು ಸುಳ್ಳು ಕಡತ ಸೃಷ್ಟಿಸುತ್ತಾರೆ. ನಂತರ ಕಡತ ನಾಶಪಡಿಸಿರುವುದಕ್ಕೆ ಸಾಕ್ಷ್ಯಾವಾಗಿರುವ ಡಿ.ಆರ್. ದಾಖಲಾತಿ ಪುಸ್ತಕವೂ ಕಾಣೆಯಾಗಿದೆ ಎಂಬ ಇನ್ನೊಂದು ನಕಲಿ ದಾಖಲೆಯನ್ನು ಸೃಷ್ಟಿಸಿಬಿಡುತ್ತಾರೆ. ಹೀಗೆ ಒಂದರ ಹಿಂದೆ ಮತ್ತೊಂದು ನಕಲಿ ದಾಖಲೆಗಳನ್ನು ತಯಾರು ಮಾಡಿಕೊಂಡೇ ಹೋಗುತ್ತಿರುತ್ತಾರೆ.

ಇಂಥದೊಂದು ಗಂಭೀರ ಪ್ರಕರಣ ಇದೀಗ ಅಧಿಕೃತವಾಗಿಯೇ ಬಯಲಾಗಿದೆ. ಉಡುಪಿಯ ಹಿರಿಯ ಮಾಹಿತಿ ಹಕ್ಕು ಕಾರ್ಯಕರ್ತರಾದ ಕೆ.ಎಸ್.ಉಪಾಧ್ಯ ಅವರು 2012ರ ಜುಲೈ 7ರಂದು ಮಾಹಿತಿ ಹಕ್ಕು ಕಾಯ್ದೆ-2005ರಂತೆ ಅಗತ್ಯ ಮಾಹಿತಿಯೊಂದನ್ನು ಕೋರಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಅರ್ಜಿ ಹಾಕಿದ್ದಾರೆ.

k.s.upadhya

ಸಾರ್ವಜನಿಕ ಮಾಹಿತಿ ಅಧಿಕಾರಿಯವರು, ‘ಕಡತ ನಾಶಪಡಿಸಲಾಗಿದೆ’ ಎಂದು ಉತ್ತರ ಕೊಟ್ಟಿದ್ದಾರೆ. ಅರ್ಜಿದಾರರು ಮುಂದುವರಿದು, ಕಡತ ನಾಶಪಡಿಸಿರುವುದಕ್ಕೆ ಇರುವ ದಾಖಲೆಯನ್ನು ಕೇಳಿದ್ದಾರೆ. ಆಗ, ಕಡತ ನಾಶಪಡಿಸಿರುವುದನ್ನು ದಾಖಲಿಸಿಡುವ ‘ಡಿ.ಆರ್. ಕಾಣೆಯಾಗಿದೆ’ ಎಂದು ಉತ್ತರ ಕೊಟ್ಟಿದ್ದಾರೆ. ಅರ್ಜಿದಾರರು ಮತ್ತೂ ಮುಂದುವರಿದು, ಡಿ.ಆರ್.ಕಾಣೆಯಾದುದಕ್ಕೆ ಇರುವ ದಾಖಲೆಯನ್ನು ಕೇಳಿದಾಗ ಉಪ ನೋಂದಣಿ ಅಧಿಕಾರಿ ಎನ್.ಮಂಜುನಾಥ್ ಅವರು 2013ರ ಆಗಸ್ಟ್ 26ರಂದು ಡಿ.ಆರ್. (Destruction Register) ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಗೆ ಲಿಖಿತ ಪತ್ರ (ಸಂಖ್ಯೆ: ಇತರೆ 16/13-14) ಬರೆದಿದ್ದಾರೆ.

dooru

ಉಪ ನೋಂದಣಾಧಿಕಾರಿಯವರ ಪತ್ರವನ್ನು ಸ್ವೀಕರಿಸಿ, ಸಿ.ನಂ.394/ಪಿಟಿಎನ್/ಯುಟಿಪಿಎಸ್/2013ರಂತೆ ವಿಚಾರಣೆ ನಡೆಸಿದ ಉಡುಪಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರುಗಳಾದ ನಾಗರಾಜ ನಾಯರಿ (49) ಹಾಗೂ ಪುಂಡಲೀಕ ಕೆಂಪರಾಯಗೋಳಿ (41) ಇವರ ಹೇಳಿಕೆಗಳನ್ನು ಪಡೆದುಕೊಳ್ಳುತ್ತಾರೆ.

ತಾನು ಕಳೆದ 15 ವರ್ಷಗಳಿಂದ ಮುದ್ರಾಂಕ ಕಚೇರಿಯಲ್ಲಿ ದಾಖಲೆಗಳನ್ನು ನಿರ್ವಹಣೆ ಮಾಡುವ ಕೆಲಸ ಮಾಡುತ್ತಿದ್ದು, ಇದೀಗ ಅಗತ್ಯವಿರುವ ದಾಖಲೆಗಳು ಹುಡುಕಿದಾಗ ಪತ್ತೆಯಾಗಿರುವುದಿಲ್ಲ. ಇದಕ್ಕೆ ನಿರ್ಲಕ್ಷ್ಯ ಕಾರಣವಲ್ಲ. ಕಡತವನ್ನು ದುರುಪಯೋಗಪಡಿಸಿರುವುದಿಲ್ಲ ಎಂದು ನಾಗರಾಜ ನಾಯರಿ ಹೇಳಿಕೆ ನೀಡುತ್ತಾರೆ.

nagaraj helike

ತಾನು ಕಳೆದ 8 ವರ್ಷಗಳಿಂದ ಮುದ್ರಾಂಕ ಕಚೇರಿಯಲ್ಲಿ ದಾಖಲೆಗಳನ್ನು ನಿರ್ವಹಣೆ ಮಾಡುವ ಕೆಲಸ ಮಾಡುತ್ತಿದ್ದು, ಇದೀಗ ಅಗತ್ಯವಿರುವ ದಾಖಲೆಗಳು ಹುಡುಕಿದಾಗ ಪತ್ತೆಯಾಗಿರುವುದಿಲ್ಲ. ಈ ದಾಖಲೆ ದುರುಪಯೋಗವಾಗಿಲ್ಲ ಎಂದು ಪುಂಡಲೀಕ ಕೆಂಪರಾಯಗೋಳ ಹೇಳಿಕೆ ನೀಡಿದ್ದಾರೆ.

pundaleeka helike

ಇಬ್ಬರ ಪೂರ್ವನಿರ್ಧರಿತವೇ ಆಗಿರುವ ಹೇಳಿಕೆಗಳನ್ನೂ ದಾಖಲಿಸಿಕೊಮಡಿರುವ ಪೊಲೀಸರು, ದಾಖಲೆಗಳು ಮುದ್ರಾಂಕ ಕಚೇರಿಯಲ್ಲಿಯೇ ಕಾಣೆಯಾಗಿರುತ್ತದೆ. ಈ ಬಗ್ಗೆ ತಾವು ತಮ್ಮ ಮೇಲಾಧಿಕಾರಿಗಳ ಸಲಹೆ ಪಡೆದು ಮುಮದಿನ ಕ್ರಮ ತೆಗೆದುಕೊಳ್ಳಬಹುದು ಎಂಬ ‘ಉಚಿತ ಸಲಹೆ’ಯನ್ನೂ ಕೊಟ್ಟು ಕೈತೊಳೆದುಕೊಂಡಿದ್ದಾರೆ.

police himbaraha

ಈ ಪ್ರಕರಣ 2013ರ ಆಗಸ್ಟ್ ನಲ್ಲಿಯೇ ಜಿಲ್ಲಾ ನೋಂದಣಾಧಿಕಾರಿಗಳ ಗಮನಕ್ಕೂ ಬಂದಿದೆ. ಆದರೆ, ಅವರು ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕನಿಷ್ಟ ಕ್ರಮವನ್ನೂ ತೆಗೆದುಕೊಳ್ಳದೆ ಉಪೇಕ್ಷಿಸಿದ್ದಾರೆ. ಇಂಥದೊಂದು ಗಂಭೀರ ಪ್ರಕರಣವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮೇಲಾಧಿಕಾರಿಗಳು ಕಡೆಗಣಿಸುತ್ತಿರುವುದು ಸಹ ಅನೇಕ ಸಂಶಯಗಳಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *