Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

WhatsAppನಿಂದ ಹಾಳಾದ ಸಂಸಾರಗಳು !

# ಮನೋವಿಶ್ವಾಸ                 # ಡಾ.ಪಿ.ವಿ.ಭಂಡಾರಿ

manovishwaasa clinic-2 copy

(ಕಳೆದ ವಾರದಿಂದ)

# ಡಾ.ಶ್ರೀ ಗಣೇಶ್ ಅವರ ವಿಶ್ಲೇಷಣೆ

ಇಂದು ಅಮೇರಿಕಾ ದೇಶದಲ್ಲಿ ನಡೆಯುತ್ತಿರುವ ವಿವಾಹ ವಿಚ್ಛೇದನಗಳನ್ನು ಗಮನಿಸಿದರೆ, ಅದರಲ್ಲಿ ‘ಆಧುನಿಕತೆ’ಯ ಸಂಕೇತವೆಂದು ನಾವು ನಂಬಿರುವ ಈ facebook, watsapp ಮುಂತಾದವು ಈ ವಿಚ್ಛೇದನಗಳಲ್ಲಿ ವಿಶಿಷ್ಟವಾದ ಒಂದು ಜಾಗವನ್ನೇ ಪಡೆದಿದೆ ಎಂಬುದು ಸ್ಪಷ್ಟವಾಗುತ್ತದೆ. ಇಂದು ಗಂಡ- ಹೆಂಡತಿ facebook ನಲ್ಲಿ ಹಾಕಿದಂಥ status ಗಳು, ಇಲ್ಲವೇ whatsapp ನಲ್ಲಿ ಕಳುಹಿಸಿದ ಮೆಸೇಜ್ ಗಳು ನ್ಯಾಯಾಲಯದಲ್ಲಿ ಗಂಡ- ಹೆಂಡಿರ ಸಂಬಂಧಗಳ ಬಗ್ಗೆ ಸಾಕ್ಷಿಗಳಾಗಿ ಪರಿವರ್ತಿಸಲ್ಲಪಟ್ಟಿರುವುದನ್ನು ಗಮನಿಸಬಹುದು.

ಇವೆಲ್ಲಕ್ಕಿಂತ, ಹೋಟೇಲ್ ಗಳಲ್ಲಿ ಹೋಗಿ ಒಂದು ಕುಟುಂಬವನ್ನೋ, ಸ್ನೇಹಿತರನ್ನೋ ಗಮನಿಸಿ. ಎಲ್ಲರೂ ಒಬ್ಬರೊಂದಿಗೆ ಒಬ್ಬರು ಸಂಭಾಷಣೆ ಮಾಡುವುದಕ್ಕಿಂತ, ಎಲ್ಲೋ ದೂರದಲ್ಲಿರುವ ಬಾಲ್ಯಮಿತ್ರನೋ ಅಥವಾ ಹಳೆಯ ಸಹೋದ್ಯೋಗಿಯೊಂದಿಗೋ ‘whatsapp’ ಮಾಡುತ್ತಾ ಊಟ ಮಾಡುತ್ತಿರುವುದನ್ನು ನೋಡಬಹುದು. ಎದುರೆದುರಿಗೆ ಮಾತನಾಡುವುದಕ್ಕಿಂತಲು ದೂರದವನೊಮದಿಗೆ ಸಂಬಂಧ ಬೆಳೆಸುವುದು ಇಂದು ಜನರ ಮನಸ್ಸಿಗೆ ಖುಷಿಯನ್ನು ಕೊಡುತ್ತಿದೆ.

manovishwasakke-4

ರಮೀಳಾ- ರಾಜೇಶ್ ಕಥೆಯನ್ನು ಗಮನಿಸಿದರೂ…

* ಪ್ರೇಮಕಥೆ ಮದುವೆಯಾಯಿತು. ನಂತರ 5 ವರ್ಷಗಳು ಸುಗಮವಾಗಿ ನಡೆದರೂ, ‘ಬಾಲ್ಯ’ದ ಪೇಮಿಯು whatsapp ನಿಂದ ಹತ್ತಿರವಾಗುವಾಗ ಹಲವು ಗೊಂದಲಗಳಿಗೆ ಕಾರಣವಾಯಿತು.

Love is Blind Marrage is an Eye Open” ಎಂಬಂತೆ, ಎಲ್ಲಾ ಮದುವೆಗಳಲ್ಲಿ ಕೂಡಾ ಹಲವು ವರುಷಗಳು ಕಳೆದಂತೆ ಭಿನ್ನಾಭಿಪ್ರಾಯಗಳು ಸಹಜ. ”ಎಲ್ಲರ ಮನೆಯ ದೋಸೆಗೆ ತೂತೆ”- ನೆನಪಿರಲಿ.

* ಗಂಡ- ಹೆಂಡತಿಯರು ಒಟ್ಟಿಗೆ ಬಾಳಿದಂತೆಲ್ಲ ಒಬ್ಬರ ಹುಳುಕು ಇನ್ನೊಬ್ಬರು ಗಮನಿಸುತ್ತಾರೆ.

* ಈ ಹುಳುಕುಗಳನ್ನು ಒಬ್ಬರಿಗೊಬ್ಬರು ಹೇಳಿಕೊಂಡು ನೇರವಾಗಿ ಪರಿಹರಿಸಿಕೊಂಡರೆ ತುಂಬಾ ಒಳ್ಳೆಯದು.

* ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ. ಧೈರ್ಯವಾಗಿ ಹೇಳುವ ಸಾಮಾಜಿಕ ಕೌಶಲದ ಕೊರತೆಯೋ ಅಥವಾ ಧೈರ್ಯವಾಗಿ ಹೇಳಿದಾಗ ಒಪ್ಪಿಕೊಳ್ಳದಿರುವ ಸಂಗಾತಿಯೋ ಇರುತ್ತಾರೆ. ಅಂಥ ಸಂದಭ್ದಲ್ಲಿ ಮನೆಯ ಹಿರಿಯಳಾದ ತಾಯಿಯೋ, ಅತ್ತೆಯೋ ಇದ್ದರೆ ಒಳ್ಳೆದು. ಆದರೆ, ಇಂದು ‘ವಿಭಕ್ತ’, ‘ಸ್ವತಂತ್ರ’ ಕುಟುಂಬಗಳಲ್ಲಿ ಹಿರಿಯರು ಇಲ್ಲವಾಗಿದ್ದಾರೆ. ಇದ್ದರೂ ಸಂಬಂಧಗಳು ಹಳಸಿ, ಹಿರಿಯರು ‘ವೃದ್ಧಾಶ್ರಮ’ಗಳಲ್ಲೋ, ಮನೆಯಿಂದ ಹೊರಗೆ ಇನ್ನೊಂದು ‘ಹೊರಮನೆ’ಯಲ್ಲೋ ಇರುವಂತೆ ಆಗಿದೆ. ಇಲ್ಲವೇ, ಕೊಲವೊಮ್ಮೆ ಒಟ್ಟಿಗೆ ಇದ್ದರೂ; ಈ ‘ವೃದ್ಧ’ರೇ- ಈ ಭಿನ್ನಾಭಿಪ್ರಾಯಗಳ ‘ಮೂಲ ವಸ್ತು’ಗಳಾಗಿದ್ದಾರೆ.

ಇಂತಹ ಸ್ಥಿತಿಯಲ್ಲಿ ಸಿಗುವವರೇ ಈ ”ಪತಿ- ಪತ್ನಿ ಔರ್ ಓ” ಕೆಲಸ ಮಾಡುವಲ್ಲಿ ಸಹೋದ್ಯೋಗಿಯೋ, ಬಾಲ್ಯದ ಪ್ರೇಯಸಿಯೋ, ತನ್ನನ್ನು ಸರಿಯಾಗಿ ‘ಅರ್ಥ’ ಮಾಡಿಕೊಳ್ಳಬಲ್ಲಂಥ ಒಬ್ಬನೇ/ಒಬ್ಬಳೇ ವ್ಯಕ್ತಿಯೋ ಹಿಂದೆ ಅವರೊಂದಿಗೆ ಸಿಗಲು ಆಫೀಸ್ ಮದ್ಯದ ”Tea Break” ಗೋ ಅಥವಾ ಕೆಲಸದ ನಂತರ ”Over Time” ಸೋಗಿನಲ್ಲಿ Ice Cream Parler  ಗಳಲ್ಲಿ ನಡೆಯುತ್ತಿದ್ದ Meeting ಗಳು ಸಂಗಾತಿಗೆ ಇತರ ಸಹೋದ್ಯೋಗಿಗಳ ಅಥವಾ ಸಂಬಂಧಿಕರ ಮೂಲಕ ಗೊತ್ತಾಗಿ ಮನೆಯಲ್ಲಿ ”ಕುರುಕ್ಷೇತ್ರ” ಗಳನ್ನೇ ಸೃಷ್ಟಿಸುತ್ತಿದ್ದವು. ಆದರೆ, ಈಗ ಇಂತಹ ವಿವಾಹೇತರ ಸಂಬಂಧಗಳಿಗೆ ಸುಖ-ದುಃಖ ಹಂಚಿಕೊಳ್ಳಲು, ದಿನದ 24 ಗಂಟೆಯೂ Proximety ಕಲ್ಪಿಸಿಕೊಡಲು ಉತ್ತಮ ಸಲಕರಣೆಯಾಗಿ Mobile ಬಂದಿದೆ.

ಮೊದಮೊದಲು ಮೊಬೈಲ್ ನ ಸಂಭಾಷಣೆಗಳಿದ್ದವು. ಬರುಬರುತ್ತಾ SMS, ಈಗ Whatsapp, Facebook Messenger, Telegram ಮುಂತಾದ ಹೊಸ ಹೊಸ App ಗಳು ಮೊಬೈಲ್ ನ ತೆಕ್ಕೆಗೆ ಸೇರಿಕೊಂಡು ಇಂತಹ ಸಂಬಂಧಗಳು ಅತೀ ವೇಗದಲ್ಲಿ ಬೆಳೆಯುವಂತಾಗಿದೆ. ಮನಸ್ಸಿನ ಭಾವನೆಗಳನ್ನು ಎದುರು ಹಂಚಿಕೊಳ್ಳಲು ಕಷ್ಟವಾದಾಗ ”Virtual”  World ನ ಈ SMS ಗಳು ಎದುರಿಗೆ ಆ ವ್ಯಕ್ತಿ ಇಲ್ಲದಾಗ ಯಾವುದೇ ಸಿಹಿ ಯಾ ಕಹಿ ಯಾ ಉದ್ರೇಕಿಸುವ ಯಾವುದೇ ಭಾವನೆಗಳನ್ನು ಸುಲಭವಾಗಿ ತನ್ನ ಬೆರಳ ತುದಿಯಿಂದ Type ಮಾಡಿ ಕಳಿಸಬಹುದಾಗಿದೆ. ಈ ಸಂದೇಶ ಸ್ವೀಕರಿಸಿದ ವ್ಯಕ್ತಿಯಲ್ಲಿ ನಿಜವಾಗಿ ಆ ಭಾವನೆಗಳು ಇಲ್ಲದಿದ್ದರೂ, Time Pass ಗಾಗಿ ಅದನ್ನು ಸ್ವೀಕರಿಸಿದರೂ, ಅದನ್ನು ಮರೆ ಮಾಚುವ ಒಂದು ಬಲ ಈ ಅಶರೀರ ಸಂದೇಶಗಳಿಗೆ ಇದೆ. ಈ ‘ಅಶರೀರ’ ಜಗತ್ತಿನ ಅಶರೀರ ಸಂದೇಶಗಳು ಕೆಲವೊಮ್ಮೆ ಶರೀರದಲ್ಲಿ ಹಲವಾರು ರೀತಿಯ ಭಾವನೆ, ಬದಲಾವಣೆ ತರುವಷ್ಟು ಶಕ್ತಿ ಹೊಂದಿರುವುದೇ ನಿಜವಾಗಿ ಆಶ್ಚರ್ಯಕರ.

ಹಲವು ಅಮಾಯಕರು, ಅವಿವಾಹಿತರು, ಒಂಟಿ ಬದುಕು ನಡೆಸುತ್ತಿರುವ ಜೀವಗಳು ಇಂದು ಕಾಮುಕರ, ‘ವಿಕಾರ’ ಹೃದಯಿಗಳ ಸೆರೆಸಿಕ್ಕುವುದು ಸರ್ವೇ ಸಾಧಾರಣವಾಗಿದೆ. ಮನೆಯಲ್ಲಿ ಗಂಡ- ಹೆಂಡಿರ ನಡುವೆ ಇರುವ ಸಣ್ಣ ಭಿನ್ನಾಭಿಪ್ರಾಯಗಳನ್ನು ತಿಳಿದುಕೊಂಡು, ಅದನ್ನು ದುರುಪಯೋಗಪಡಿಸಿಕೊಂಡು, ಕೇವಲ ”Time Pass” ಗಾಗಿ ”Text Message” ಗಳನ್ನು ಕಳುಹಿಸುವವರು, ಇಲ್ಲವೇ ‘ನೊಂದ ಜೀವ’ಕ್ಕೆ ಭರವಸೆ ಕೊಡುವ ನೆಪದಲ್ಲಿ ತನ್ನ ಕೌಟುಂಬಿಕ ಜೀವನದಲ್ಲಿ ಸಿಗದಿರುವ ಖುಷಿಯನ್ನು ಪಡೆಯಲು ಹೊಂಚು ಹಾಕುತ್ತಾ, ಹಲವು ಜನರೊಂದಿಗೆ ಈ  ರೀತಿಯ ‘ಸರಸ ಸಲ್ಲಾಪ’ ನಡೆಸುತ್ತಿರುವವರು ಈಗ ಹಲವು Variety ಸಂಬಂಧಗಳು ಬೆಳೆಯುತ್ತಾ ಬಂದಿದೆ. ಒಟ್ಟಿನಲ್ಲಿ ಹಲವು ದಾಂಪತ್ಯಗಳನ್ನು ವಿರಸದತ್ತ ದೂಡಿದೆ.

manovishwasakke-3

ದಾಂಪತ್ಯದಲ್ಲಿ ವಿರಸ ಬಂದರೆ…

* ಗಂಡ ಹೆಂಡತಿ ಒಬ್ಬರ ಮುಂದೆ ಒಬ್ಬರು ಕುಳಿತು ತಮ್ಮ ಸಮಸ್ಯೆಗಳ ಬಗ್ಗೆ ಮಾತುಕತೆ ಮುಕ್ತವಾಗಿ ನಡೆಸುವುದು ಸಊಕ್ತ.

* ಗಂಡ- ಹೆಂಡತಿಯ ನಡುವೆ ಇರುವ ಯಾವುದೇ ಭಿನ್ನಾಭಿಪ್ರಾಯವನ್ನೂ ಸಹ ಉದ್ಯೋಗಿಗಳೊಂದಿಗೆ, ಬಾಲ್ಯ ಸ್ನೇಹಿತರೊಂದಿಗೆ, ಪಕ್ಕದ ಮನೆಯವರೊಂದಿಗೆ ಹಂಚಿಕೊಂಡಲ್ಲಿ ಅವರು ಇನ್ನೊಬ್ಬರ ಹತ್ತಿರ ಇದನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ ಎಂಬುದನ್ನು ಗಮನಿಸಿ.

* ಗಂಡ- ಹೆಂಡತಿ ಸಂಬಂಧಗಳು ಚೆನ್ನಾಗಿ ಇರುವಾಗ ಕೂಡ ಇಬ್ಬರು ಒಟ್ಟಿಗೆ ಇದ್ದ ಸಂದರ್ಭಗಳಲ್ಲಿ Mobile Chat ನಲ್ಲಿ ಸಮಯ ಕಳೆಯುವುದು, Forward Message ಗಳನ್ನು ಕಳುಹಿಸುವುದು, Whatsapp ಗಳಲ್ಲಿ ಸಂಭಾಷಣೆಯಲ್ಲಿ ನಿರತರಾಗಿರುವುದು ಹಲವೊಮ್ಮೆ ಭಿನ್ನಾಭಿಪ್ರಾಯ ಬೀಜವನ್ನು ಬಿತ್ತುತ್ತದೆ. ಮುಂದೆ ಇದೇ ದೊಡ್ಡ ಮರವಾಗಿ ‘ಸಂಸಾರ ವೃಕ್ಷ’ ವನ್ನು ಹಾಳು ಮಾಡುತ್ತದೆ.

* Whatsapp ಸಂದೇಶಗಳಲ್ಲಿ ಮಗ್ನರಾಗಿರುವ ಗೃಹಿಣಿಯರು ಸರಿಯಾದ ಸಮಯಕ್ಕೆ ಅಡುಗೆ ಮುಗಿಸದೆ ಅಥವಾ ಸೀದಿ ಹೋದ ಪದಾರ್ಥ, ಪಲ್ಯ ಗಂಡನಿಗೆ ಬಡಿಸಿ ಜಗಳ ಮಾಡಿಕೊಳ್ಳುತ್ತಿರುವುದು ಸರ್ವೇ ಸಾಮಾನ್ಯವಾಗಿ ಮನೆಗಳಲ್ಲಿ ನಡೆಯುತ್ತಿದೆ.

* Whatsapp ಸಂದೇಶಗಳಲ್ಲಿ ಸಿಕ್ಕಿದ ಹಲವು ‘ಲೈಂಗಿಕ ಚಿತ್ರಗಳು’ ಹದಿ ಹರೆಯದ ಮಕ್ಕಳು ತಾಯಿ ತಂದೆಯರ ಮೊಬೈಲ್ ಬಳಸಿ ಆಟವಾಡುವಾಗ ಆ ಮಕ್ಕಳ ಕಣ್ಣಿಗೆ ಸಿಕ್ಕಿ ಆ ಮಕ್ಕಳನ್ನು ಕೂಡಾ ‘ಲೈಂಗಿಕ’ ವಿಷಯಗಳತ್ತ ಆಕರ್ಷಿಸುವ ಸಾಧನಗಳಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಮೊಬೈಲ್ ಅವಾಂತರಗಳು.

* ಕಚೇರಿಗಳಲ್ಲಿ ಕೆಲಸದ ಸಮಯದಲ್ಲಿ ದಿನಕ್ಕೆ ಸರಾಸರಿ ಒಂದು ಸಾವಿರ ಗ್ರೂಪ್ ಮೆಸೆಜ್ ಗಳನ್ನು ಗಮನಿಸಿ ಕೆಲಸ ಮಾಡುತ್ತಿರುವ ವೈದ್ಯರು, ಅಧಿಕಾರಿಗಳು, ದಾದಿಯರು, ಡ್ರೈವರ್ ಗಳು ಕೆಲಸದಲ್ಲಿ ಏಕಾಗ್ರತೆ ಕಳೆದುಕೊಂಡು ಹಲವು ಅವಘಡಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲಸ ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಕುಟುಂಬವನ್ನು ದುಃಸ್ಥಿತಿಗೆ ತರುತ್ತಿದ್ದಾರೆ.

ಒಟ್ಟಿನಲ್ಲಿ ಈ ಮೊಬೈಲ್, ವಾಟ್ಸಾಪ್ ಹಲವು ಮನೆಗಳನ್ನು ಹಾಳು ಮಾಡುವ, ಹಲವು ‘ಮನಸ್ಸು’ ಗಳನ್ನು ಕೆಡಿಸುವ ಸಾಧಗಳಾಗಿವೆ.

manovishwasakke-1

ಸುಖಕರ ದಾಂಪತ್ಯಕ್ಕಾಗಿ ಡಾ.ಶ್ರೀಗಣೇಶ್ ರವರ ಸೂತ್ರಗಳು

* ನಿಮ್ಮ ಸಂಗಾತಿಯ ಮೇಲೆ ನಿಮ್ಮ ವಿಚಾರಧಾರೆಗಳನ್ನು ಹೇರಬೇಡಿ.

* ನಿಮ್ಮ ಸಂಗಾತಿ ತನ್ನ ತಾಯಿ, ತಂದೆ ಅಥವಾ ಅಣ್ಣ ತಮ್ಮಂದಿರಿಗೆ ಅಥವಾ ಅಕ್ಕ ತಂಗಿಯರಿಗೆ ಏನೇ ಕೊಟ್ಟರೂ, ಸಹಾಯ ಮಾಡಿದರೂ ಪ್ರಶ್ನಿಸಬೇಡಿ.

* ಸಂಗಾತಿಯ ಬಟ್ಟೆ, ಪರ್ಸ್, ಮೊಬೈಲ್ ಎಂದೂ ಪರೀಕ್ಷಿಸಬೇಡಿ.

* ನಿಮ್ಮ ಪ್ರಾಣ ಸ್ನೇಹಿತನ ಬಳಿಯಲ್ಲಿ ಕೂಡಾ ಸಂಗಾತಿಯ ವಿರುದ್ಧವಾಗಿ ಎಮದೂ ಮಾತನಾಡಬೇಡಿ.

* ನಿಮ್ಮಿಬ್ಬರ ನಡುವೆ ಏನಾದರೂ ಭಿನ್ನಾಭಿಪ್ರಾಯವಿದ್ದಲ್ಲಿ ಅದನ್ನು ಮುಖಾಮುಖಿ ಕುಳಿತು ಚರ್ಚಿಸಿ. ಅದು ಚರ್ಚಿಸಲಾಗದೇ ಇದ್ದಂತಹ ವಿಷಯವೆನಿಸಿದಲ್ಲಿ ಇನ್ನೊಬ್ಬರಲ್ಲಿ ಹೇಳುವಂಥದ್ದು ಖಂಡಿತಾ ಅಲ್ಲ.

* ಭಿನ್ನಾಭಿಪ್ರಾಯ ತೀವ್ರವಾದಲ್ಲಿ ನಿಮ್ಮ ಈ ಸಮಸ್ಯೆ ಆಲಿಸುವ ನಂಬಿಗಸ್ಥ ಹಿರಿಯರೋ ಅಥವಾ ಮಾನಸಿಕ ಆರೋಗ್ಯದ ವಿಷಯದಲ್ಲಿ ಪರಿಣಿತ ವೈದ್ಯರು, ಮನಃಶಾಸ್ತ್ರಜ್ಞರು ಇಲ್ಲವೇ ಮನೋ ಸಾಮಾಜಿಕ ತಜ್ಞರನ್ನು ಭೇಟಿ ಮಾಡಿ ನಿಮ್ಮ ಮನಸ್ಸಿನ ಸಂದೇಹಗಳನ್ನು ತಿಳಿಸಿ ಸಹಾಯ ಪಡೆಯಿರಿ. ಆಪ್ತ ಸಲಹೆ ಸಮಾಧಾನ ಪಡೆಯಿರಿ.

(ಅಂಕಣಕಾರರಾದ ಡಾ.ಪಿ.ವಿ.ಭಂಡಾರಿಯವರು, ಉಡುಪಿಯ ದೊಡ್ಡಣಗುಡ್ಡೆಯಲ್ಲಿರುವ ಡಾ.ಎ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ‘ಸಂಯಮ’ ಪ್ರಶಸ್ತಿ ಪುರಸ್ಕೃತರು)

Leave a Reply

Your email address will not be published. Required fields are marked *