Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ಕಾರ್ಪೋರೇಟ್ ಸಂಸ್ಥೆಗಳಿಗೆ ಸಹಾಯ ಮಾಡಲು ಕೇಂದ್ರದಿಂದ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ: ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಆರೋಪ

ಉಡುಪಿ: ಸ್ವದೇಶಿ ಮತ್ತು ವಿದೇಶಿ ಕಾರ್ಪೋರೇಟ್ ಸಂಸ್ಥೆಗಳ ಸಹಕಾರದಿಂದ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅವುಗಳಿಗೆ ಸಹಾಯ ಮಾಡುವ ಉದ್ಧೇಶದಿಂದಲೇ ಇದೀಗ ಕಾರ್ಮಿಕರ ವಿರೋಧಿಯಾಗುವ ರೀತಿಯಲ್ಲಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಕೆಲಸಕ್ಕೆ ಮುಂದಾಗಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿದ ದೇಶವ್ಯಾಪಿ ಪ್ರತಿಭಟನೆಯ ಭಾಗವಾಗಿ, ಜೆಸಿಟಿಯು ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ಸಂಜೆ ಉಟುಪಿ ನಗರದ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ 19 ಮಂದಿ ಗುತ್ತಿಗೆ ಕಾರ್ಮಿಕರಿದ್ದು, 2011ರಿಂದ ಇವರ ವೇತನದಲ್ಲಿ ತಿಂಗಳಿಗೆ ಒಂದು ಸಾವಿರ ರು.ಗಳಂತೆ 6 ಲಕ್ಷ ರು.ಗಳನ್ನು ಸಂಗ್ರಹಿಸಿರುವ ಗುತ್ತಿಗೆದಾರ ಮಂಗಳೂರಿನ ಸುರೇಶ್ ಶೆಟ್ಟಿ ಕಾರ್ಮಿಕರ ಹೆಸರಿನಲ್ಲಿ ಪಿಎಫ್ ಗೆ ಹಣ ಪಾವತಿಸದೆ ವಂಚಿಸಿದ್ದಾರೆ ಎಂಬ ಗಂಭೀರ ಅಪಾದನೆಯನ್ನೂ ಇದೇ ಸಂದರ್ಭದಲ್ಲಿ ಬಾಲಕೃಷ್ಣ ಶೆಟ್ಟಿ ಮಾಡಿದರು.

ಕೇಂದ್ರ ಸರಕಾರವು ಏಕಪಕ್ಷೀಯವಾಗಿ ಮತ್ತು ಮಾಲೀಕರ ಪರವಾಗಿ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಲು ಮುಂದಾಗಿರುವುದರ ವಿರುದ್ಧ, ಕಾರ್ಮಿಕ ಕಾನೂನುಗಳನ್ನು ಮೊಟಕುಗೊಳಿಸಲು ರಾಜಸ್ಥಾನ ಸರಕಾರ ಮಾಡಿರುವ ಕಾರ್ಮಿಕ ವಿರೋಧಿ ಕ್ರಮಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಹಾಗೂ ಎಲ್ಲಾ ಕಾರ್ಖಾನೆ ಮತ್ತು ಉದ್ಧಿಮೆಗಳಲ್ಲಿ ಗುತ್ತಿಗೆ- ಹೊರ ಗುತ್ತಿಗೆ ಪದ್ಧತಿಗಳನ್ನು ನಿಷೇಧಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿಬೇಕೆಂಬ ಪ್ರಮುಖ ಮೂರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಯಿತು.

adamar sripati acharya bhashana copy

ಪ್ರತಿಭಟನಾ ಸಭೆಗೆ ಮುನ್ನ ಅಜ್ಜರಕಾಡು ಎಲ್.ಐ.ಸಿ.ಕಚೇರಿಯ ಆವರಣದಿಂದ ಮೆರವಣಿಗೆ ಹೊರಟು ತಾಲೂಕು ಪಂಚಾಯಿತಿ, ಕೋರ್ಟ್, ಕವಿ ಮುದ್ಧಣ ಮಾರ್ಗವಾಗಿ ಬಸ್ ನಿಲ್ದಾಣದ ವರಗೆ ಕಾರ್ಮಿಕರು ವಿವಿಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ಜೆಸಿಟಿಯು ಸಂಚಾಲಕ ಅದಮಾರು ಶ್ರೀಮತಿ ಆಚಾರ್ಯ, ಬಿ.ಎಂ.ಎಸ್ ಮುಖಂಡ ಬಾಲಗಂಗಾಧರ ರಾವ್, ಬಿಎಸ್.ಎನ್.ಎಲ್. ನೌಕರರ ಸಂಘದ ಮುಖಂಡ ಶಶಿಧರ ಗೊಲ್ಲ, ವಿಮಾ ನೌಕರರ ಸಂಘದ ಮುಖಂಡ ಯು.ಗುರುದತ್, ಎ.ಐ.ಟಿ.ಯು.ಸಿ. ಮುಖಂಡ ಕೆ.ವಿ.ಭಟ್, ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮುಖಂಡ ಯು.ಶಿವರಾಯ, ಸಿಪಿಐಎಂ ಮುಖಂಡ ವಿಶ್ವನಾಥ ರೈ ಮೊದಲಾದವರು ಪ್ರತಿಭಟನಾ ಸಭೆಯಲ್ಲಿದ್ದರು.

Leave a Reply

Your email address will not be published. Required fields are marked *