Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಂಗಳೂರು: ಆರೋಗ್ಯ-ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿಗಳಿಗೆ ಆಯೋಗದ ನೋಟೀಸ್ !

ಉಡುಪಿ: ಮಾಹಿತಿ ಹಕ್ಕು ಕಾಯ್ದೆ- 2005ರಂತೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಕೋರಿದ ಅರ್ಜಿದಾರರಿಗೆ ಮಾಹಿತಿ ನೀಡದೆ ಕಾಯ್ದೆಯನ್ನು ಉಲ್ಲಂಘಿಸಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವ ಸಹಾಯಕ ಆಡಳಿತಾಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಯವರಿಗೆ ಕರ್ನಾಟಕ ಮಾಹಿತಿ ಆಯೋಗವು ನೋಟೀಸ್ ಜ್ಯಾರಿಗೊಳಿಸಿದೆ.

2015ರ ಜನವರಿ 9ರಂದು ಮಾಹಿತಿ ಆಯೋಗದ ಮುಂದೆ ಅಗತ್ಯ ದಸ್ತಾವೇಜುಗಳೊಂದಿಗೆ ಹಾಜರಾಗಿ ಹೇಳಿಕೆ ನೀಡುವಂತೆ ಆಯೋಗದ ಅಧೀನ ಕಾರ್ಯದರ್ಶಿಗಳು ನೋಟೀಸ್ ಜ್ಯಾರಿಗೊಳಿಸಿದ್ದಾರೆ.

1986ರ ಜನವರಿ ಒಂದರಿಂದ 2013ರ ಅಕ್ಟೋಬರ್ 31ರ ವರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ, ಆತ್ಮಹತ್ಯೆ ಮತ್ತು ಅಸಹಜ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾದ ಮೃತದೇಹಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವಂತೆ ಕೋರಿ ಉಡುಪಿಯ ಶ್ರೀರಾಮ ದಿವಾಣ ಅವರು 2013ರ ಅಕ್ಟೋಬರ್ 31ರಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಆರೋಗ್ಯಾಧಿಕಾರಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ನವೆಂಬರ್ 7ರಂದು ನಿಯಮ 6(3)ರಂತೆ ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯವರಿಗೆ ವರ್ಗಾಯಿಸಿದ್ದರು. ಕಾಯ್ದೆಯನುಸಾರ, ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯವರು ನವೆಂಬರ್ 31ರ ಒಳಗೆ ಅರ್ಜಿದಾರರಿಗೆ ಅವರು ಮಾಹಿತಿಗಳನ್ನು ನೀಡಬೇಕಾಗಿತ್ತು.

ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸದೆ ಕಡೆಗಣಿಸಿದ ಆಡಳಿತ ವೈದ್ಯಾಧಿಕಾರಿಗಳು ಯಾರನ್ನೋ ರಕ್ಷಿಸುವ ಸಲುವಾಗಿ ಉದ್ಧೇಶಪೂರ್ವಕವಾಗಿ ಅರ್ಜಿದಾರರಿಗೆ ಮಾಹಿತಿಯನ್ನು ಕೊಡದೆ, ಅನಗತ್ಯವಾಗಿ 2014ರ ಜನವರಿ 17ರಂದು ನಿಯಮ 6(3)ರನ್ವಯ ಅರ್ಜಿಯನ್ನು ಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿಯವರಿಗೆ ವರ್ಗಾಯಿಸಿ ಕೈತೊಳೆದುಕೊಂಡಿದ್ದರು.

ಈ ನಡುವೆ, ಅರ್ಜಿದಾರರಾದ ಶ್ರೀರಾಮ ದಿವಾಣ ಅವರು ಕೋರಿದ ಮಾಹಿತಿಗಳು ತಮಗೆ ಲಭಿಸದ ಹಿನ್ನೆಲೆಯಲ್ಲಿ ಕಾಯ್ದೆಯಂತೆ 2013ರ ಡಿಸೆಂಬರ್ 21ರಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯ ಮೇಲ್ಮನವಿ ಪ್ರಾಧಿಕಾರಕ್ಕೆ ಮೊದಲ ಅಪೀಲ್ ಸಲ್ಲಿಸಿದ್ದರು. ಮೊದಲ ಅಪೀಲ್ ಸಲ್ಲಿಸಿದ ಬಳಿಕವೂ ನಿಗದಿತ ಅವಧಿಯಲ್ಲಿ ಮಾಹಿತಿ ಲಭಿಸದ ಕಾರಣ, 2014ರ ಫೆಬ್ರವರಿ 5ರಂದು ಕರ್ನಾಟಕ ಮಾಹಿತಿ ಆಯೋಗಕ್ಕೆ ಎರಡನೇ ಅಪೀಲ್ ಸಲ್ಲಿಸಿದ್ದರು.

ಎರಡನೇ ಅಪೀಲ್ ಸಲ್ಲಿಸಿದ 9 ತಿಂಗಳ ಸುಧೀರ್ಘ ಅವಧಿಯ ಬಳಿಕ 2014ರ ನವೆಂಬರ್ 22ರಂದು ಆಯೋಗದ ಅಧೀನ ಕಾರ್ಯದರ್ಶಿಗಳು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಪ್ರತಿವಾದಿಗಳಿಗೆ ನೋಟೀಸ್ ಜ್ಯಾರಿಗೊಳಿಸಿದ್ದಾರೆ.

One Comment

  1. n.cvnayaka1@gmail.com'

    ChannaveeraNayaka

    December 6, 2014 at 5:51 pm

    E tara escapes answer kodvaranna sumne bedbardu,kanunu prakara faneshment agbeku,

Leave a Reply

Your email address will not be published. Required fields are marked *